Breaking News

ಪ್ರಿಯಕರನಿಗಾಗಿ ಸಾಮೂಹಿಕ ಅತ್ಯಾಚಾರದ ಕತೆ ಕಟ್ಟಿದ ಯುವತಿ: ಬೆಸ್ತುಬಿದ್ದ 1000 ಪೊಲೀಸರು!!

ನಾಗ್ಪುರ : ಪ್ರಿಯಕರನನ್ನು ಮದುವೆ ಆಗಲು 19 ವರ್ಷದ ಯುವತಿಯೊಬ್ಬಳು ಸಾಮೂಹಿಕ ಅತ್ಯಾಚಾರ ಆಗಿದೆ ಎಂದು ಸುಳ್ಳು ದೂರು ನೀಡಿದ್ದರಿಂದ ಹಿರಿಯ ಅಧಿಕಾರಿಗಳು ಸೇರಿದಂತೆ 1000 ಪೊಲೀಸರು ದಿನವೀಡಿ ತನಿಖೆ ನಡೆಸಿ ಬೆಸ್ತು ಬಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ 11 ಗಂಟೆಗೆ ಯುವತಿ ಕಲ್ಮನಾ ಪೊಲೀಸ್ ಠಾಣೆಗೆ ಬಂದು ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದೂರು ನೀಡಿದಳು. ದೂರು ಸ್ವೀಕರಿಸುತ್ತಿದ್ದಂತೆ ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಸ್ವತಃ ಅಖಾಡಕ್ಕೆ ಇಳಿದು ತನಿಖೆಗೆ ಮುಂದಾದರು.

ಯುವತಿಯ ಮಾಹಿತಿ ಆಧರಿಸಿ ಘಟನಾ ಸ್ಥಳದಲ್ಲಿನ 250 ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿದ್ದು, ಸುಮಾರು 1000 ಪೊಲೀಸರ 40 ತಂಡಗಳನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು. ಸತತ 24 ಗಂಟೆ ತನಿಖೆ ನಡೆಸಿದ ನಂತರ ಪೊಲೀಸರಿಗೆ ಗೊತ್ತಾಗಿದ್ದು ಯುವತಿ ಕತೆ ಕಟ್ಟಿ ಸುಳ್ಳು ದೂರು ನೀಡಿದ್ದಾಳೆ ಎಂಬುದು.

ಪೊಲೀಸರು ಯುವತಿಯ ವಿಚಾರಣೆ ನಡೆಸಿ ಸತ್ಯ ಹೇಳುವಂತೆ ಒತ್ತಡ ಹೇರಿದಾಗ ಗೆಳೆಯನನ್ನು ಮದುವೆ ಆಗಲು ಈ ರೀತಿ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

ಇದಕ್ಕೂ ಮುನ್ನ ನನ್ನನ್ನು ಚಿಕಲಿ ಎಂಬ ಪ್ರದೇಶಕ್ಕೆ ಕರೆದೊಯ್ದ ಇಬ್ಬರು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದಳು.

ಇಂದು ಬೆಳಿಗ್ಗೆ ಸಂಗೀತ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಾರಿ ತೋರುವಂತೆ ಕೇಳಿದ ಇಬ್ಬರು ವ್ಯಕ್ತಿಗಳು ತನ್ನನ್ನು ಕಿಡ್ನಾಪ್ ಮಾಡಿದ್ದರು. ಇಬ್ಬರು ಬಿಳಿ ಸಮವಸ್ತ್ರ ಧರಿಸಿದ್ದರು ಎಂದು ಘಟನೆಯನ್ನು ವಿವರಿಸಿದ್ದಳು. ಆದರೆ ಇದೆಲ್ಲಾ ಕಟ್ಟುಕತೆ ಅಂತ ಗೊತ್ತಾದಾಗ ಪೊಲೀಸರು ಬೆಸ್ತುಬಿದ್ದರು.

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *