ಹಾಸ್ಟೇಲ್ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ : 1105 ಮಕ್ಕಳು ಭಾಗಿ

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಲ್ಲಿ ಸ್ವಯಂ ರಕ್ಷಣಾ ಕೌಶಲ್ಯ ಬೆಳೆಸಲು ಸರ್ಕಾರವು ಕರಾಟೆ,ಜೂಡೋ,ಟೇಕ್ವಾಂಡೋ ಮತ್ತಿತರ ಸಮರ ಕಲೆಗಳ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.ಹುಬ್ಬಳ್ಳಿ ಧಾರವಾಡ ಅವಳಿ ನಗರದ ಐದು ಹಾಸ್ಟೇಲುಗಳಲ್ಲಿ ಜನವರಿ 1 ರಿಂದ ಕರಾಟೆ ತರಬೇತಿ ಪ್ರಾರಂಭವಾಗಿದೆ ,1105 ವಿದ್ಯಾರ್ಥಿನಿಯರಿಗೆ 60 ದಿನಗಳ ಕಾಲ ಈ ತರಬೇತಿ ನಡೆಯಲಿದೆ.

ಸೈದಾಪೂರ,ಮಾಳಮಡ್ಡಿ,ಶಿವಗಿರಿ , ಕರ್ನಾಟಕ ವಿವಿ ಆವರಣ ಮತ್ತು ಹುಬ್ಬಳ್ಳಿಯ ಶ್ರೇಯಾ ನಗರದ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೇಲುಗಳಲ್ಲಿ ಜ.1 ರಿಂದ ಕರಾಟೆ ತರಬೇತಿ ಪ್ರಾರಂಭವಾಗಿದೆ.ಪ್ರತಿ ದಿನ ಮುಂಜಾನೆ ಹಾಗೂ ಸಂಜೆ ಎರಡು ಅವಧಿಗಳಲ್ಲಿ 60 ದಿನಗಳ ಕಾಲ ಸಮರ ಕಲೆಯ ಕೌಶಲ್ಯಗಳ ಕಲಿಕೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ ಹೇಳಿದ್ದಾರೆ.

Share News

About BigTv News

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page