Breaking News

ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಜನತಾ ಬಜಾರ ಕಟ್ಟಡ ಕಾಮಗಾರಿ ಪ್ರಾರಂಭ* *ವ್ಯಾಪಾರಸ್ಥರಿಗೆ ಗಡುವು ನೀಡದಿರುವದನ್ನು ಖಂಡಿಸಿ ಪ್ರತಿಭಟನೆ*

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಜನತಾ ಬಜಾರ ಆಯ್ಕೆಯಾಗಿದ್ದು ಮಾರುಕಟ್ಟೆ ಸ್ಥಳಾಂತರ ಮಾಡುವಂತೆ ಪಾಲಿಕೆ ಗಡುವು ನೀಡಿದೇ ಕಾಮಗಾರಿ ಆರಂಭಿಸಿರುವದನ್ನು ಖಂಡಿಸಿ ಇಂದುಜನತಾ ಬಜಾರ ತರಕಾರಿ ಹಾಗೂ ವಿವಿಧ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಇದರಿಂದ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತದೆ. ಅಧಿಕಾರಿಗಳು ನೂತನ ಕಾಮಗಾರಿ ಪೂರ್ಣಗೊಳ್ಳುವವರೆಗೂ ವ್ಯಾಪಾರ ವಹಿವಾಟಿಗೆಚಿಕ್ಕ ವ್ಯಾಪಾರಸ್ಥರಿಗೆ ಪರ್ಯಾಯ ಸ್ಥಳ ನೀಡಲಿ. ಬಳಿಕವೇ ನಾವೂ ಈ ಮಾರುಕಟ್ಟೆ ಬಿಟ್ಟು ಹೋಗುತ್ತೇವೆ ಎಂದು ಪ್ರತಿಭಟನಾಕಾರರುಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದರು.ನಾವು ಸುಮಾರು ವರ್ಷಗಳಿಂದ ಇದೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಒಮ್ಮಿಂದೊಮ್ಮೆಲೆ ಈಗ ಕಾಮಗಾರಿ ಹೆಸರಿನಲ್ಲಿ ನಮ್ಮ ವ್ಯಾಪಾರ ವಹಿವಾಟಿಗೆ ಅಡ್ಡಿ ಪಡಿಸಲಾಗುತ್ತಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.ಪ್ರತಿಭಟನೆಯ ಬಳಿಕ ರ್ಯಾಲಿ ಮುಖಾಂತರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ‌ ಸಲ್ಲಿಸಿದರು. ‌ ‌ಪ್ರತಿಭಟನೆಯಲ್ಲಿ ಅಧ್ಯಕ್ಷ ಮುಜಾಹಿದ,ಪ್ರೇಮನಾಥ ಚಿಕ್ಕತುಂಬಳ, ಉಪಾಧ್ಯಕ್ಷರಾದ ನಾರಾಯಣ ಮುದ್ದಣ್ಣವರ, ರಾಜು ವಾಲ್ಮೀಕಿ, ರಾಘವೇಂದ್ರ ತಾಂಬ್ರೆ, ಹೀರಾಲಾಲ ಬದ್ದಿ, ರಮೇಶ ಪೂಜಾರ ಸೇರಿದಂತೆ ನೂರಾರು ವ್ಯಾಪಾರಸ್ಥರು ಭಾಗಿಯಾಗಿದ್ದರು.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *