Breaking News

ಕ್ಯಾಬಿನೆಟ್​ ಸಭೆಯಲ್ಲಿ ಹತ್ತಾರು ಮಹತ್ತರ ನಿರ್ಧಾರ



ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಹತ್ತಾರು ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದ ಎಲ್ಲ ಕಡೆ ಕೋವಿಡ್​ ಪ್ರೋಟೋಕಾಲ್​ ಬೇಕಾ? ಅಂತ ಸಚಿವರು ಕೇಳಿದ್ದಾರೆ. ಹೀಗಾಗಿ ನಾಲ್ಕೈದು ದಿನ ಬಿಟ್ಟು ತಜ್ಞರ ಜತೆ ಚರ್ಚಿಸಿ ಇತರ ನಗರಗಳಿಗೆ ರಿಲೀಫ್​ ಮಾಡಲು ನಿರ್ಧರಿಸಲಾಗಿದೆ.

ಆಯುಷ್ ಶುಶ್ರೂಷಕರ 80 ಹುದ್ದೆಗೆ ನೇರ ನೇಮಕ. ಗುತ್ತಿಗೆ ನೌಕರರಿಗೆ ವರ್ಷಕ್ಕೆ ಎರಡು ಕೃಪಾಂಕ ಕೊಡಲು ನಿರ್ಧಾರ.

ಅಂಬರೀಷ್ ಸ್ಮಾರಕ‌ ನಿರ್ಮಿಸಲು 12 ಕೋಟಿ ರೂ.

ಸಲು.ಕಾರ್ಕಳದ ನ್ಯಾಯಾಲಯಕ್ಕೆ 19 ಕೋಟಿ ರೂ. ಮಂಜೂರು.

ಮುಳುಬಾಗಿಲು ಕೋರ್ಟ್​ಗೆ 16 ಕೋಟಿ ರೂ.

ಮೈಸೂರು ಮೂಕನಹಳ್ಳಿ ಒಕ್ಕಲಿಗರ ಸಂಘಕ್ಕೆ ನೀಡಿದ್ದ ಲ್ಯಾಂಡ್ ಯೂಸ್ ತಿದ್ದುಪಡಿ.

ಹಿರೀಸಾವೆ ಬಳಿ ಆದಿ ಚುಂಚನಗಿರಿ ಮಠಕ್ಕೆ ಇಪ್ಪತ್ತೆರಡು ಎಕರೆ ಜಾಗ. ಶಾಲೆ, ವಿದ್ಯಾರ್ಥಿ‌ನಿಲಯ, ಧ್ಯಾನ‌ಮಂದಿರ, ಅನಾಥಾಶ್ರಮ, ಇತರೆ ಕಲ್ಯಾಣ ಕಾರ್ಯಕ್ಕೆ ಬಳಸಿಕೊಳ್ಳಬೇಕು.

ನೋಂದಣಿ ಮುದ್ರಾಂಕ ಇಲಾಖೆಗೆ ಐಟಿ ಉಪಕರಣ ಖರೀದಿ ನಿರ್ವಹಣೆಗೆ ಮಾನ ಸಂಪನ್ಮೂಲ ಪೂರೈಕೆ ಮಾಡಲು 406 ಕೋಟಿ ರೂ. ಅನುದಾನ.

ಜೆಜೆಎಂ ಅಡಿ ಎಲ್ಲ‌ ಮನೆಗೆ ನೀರು ಕೊಡಲು ರಾಜ್ಯದ ಕಾಂಟ್ರಿಬ್ಯೂಷನ್​ಗಾಗಿ ವಿಶ್ವ ಬ್ಯಾಂಕ್​ನಲ್ಲಿ‌ ಲೋನ್ ಪಡೆಯಲು ಅನುಮತಿ.

9 ಸಾವಿರ ಕೋಟಿಯಲ್ಲಿ 38೦೦ ಕೋಟಿ ಕೊಡುವುದು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಗರೋತ್ಥಾನ ಯೋಜನೆಯಿಂದ 5 ವರ್ಷಕ್ಕೆ ಒಟ್ಟು 3885 ಕೋಟಿ ರೂ. ಕೊಡುವುದು.

ಬೆಂಗಳೂರು ನಗರಕ್ಕೆ ಅಮೃತ ಯೋಜನೆಯಡಿ 6 ಸಾವಿರ ಕೋಟಿ ರೂ. ಖರ್ಚು ಮಾಡಲು ಸಂಪುಟ ಅನುದಾನ.

Share News

About admin

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *