ಹೈದರಾಬಾದ್: ಯಾರೋ ದುಷ್ಕರ್ಮಿಗಳು ಮಹಾಕಾಳಿ ದೇವಿ ಮೂರ್ತಿಯ ಪಾದದ ಬಳಿ ವ್ಯಕ್ತಿಯೊಬ್ಬನ ತಲೆ ಕತ್ತರಿಸಿ ಇಟ್ಟಿದ್ದಾರೆ.. ಈ ಭಯಾನಕ ದೃಶ್ಯ ಕಂಡ ಬಂದಿದ್ದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ಸಂಭಿವಸಿದೆ.
ಈ ಗ್ರಾಮದಲ್ಲಿ ಮಹಾಕಾಳಿ ದೇವಸ್ಥಾನವಿದೆ. ದೇಗುಲದ ಆವರಣದಲ್ಲಿ ಬೃಹತ್ ಕಾಳಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಿನ್ನೆ ಪೂಜೆ ಮಾಡಲೆಂದು ಅರ್ಚಕರು ದೇಗುಲಕ್ಕೆ ಬಂದಾಗ ದೇವಿ ಪಾದದ ಅಡಿ ವ್ಯಕ್ತಿಯ ತಲೆ ಪತ್ತೆಯಾಗಿದೆ. ರುಂಡವನ್ನ ನೋಡಿ ಬೆಚ್ಚಿಬಿದ್ದ ಅರ್ಚಕರು ಚೀರಾಡಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯರು ಈ ದೃಶ್ಯ ನೋಡಿ ಭಯಗೊಂಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.ಕೂದಲು ಮತ್ತು ಚರ್ಮವನ್ನು ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

