ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ದೇಗುಲದಲ್ಲಿ ತ್ರಿಶೂಲ ಕಳಚಿಬಿದ್ದಿದೆ.
ದೇಗುಲದ ಶಿಬಾರದ ಮೇಲೆ ಅಳವಡಿಸಿದ್ದ ತ್ರಿಶೂಲ ಕೆಳಗೆ ಬಿದ್ದಿದೆ. ಕಳೆದ ವರ್ಷ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಕೂಡ ಇದೇ ತ್ರಿಶೂಲ ಕಳಚಿ ಬಿದ್ದಿತ್ತು. ಆದರೆ ದೇವಾಲಯದ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲಿಸಲು ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳನ್ನು ಗಮನಿಸಿದೆ. ಈ ವೇಳೆ ಕೋತಿಗಳು ತ್ರಿಶೂಲವನ್ನು ಬೀಳಿಸಿದ್ದು ಬೆಳಕಿಗೆ ಬಂದಿದೆ. ಕೋತಿ ಶಿಬಾರದ ಕಲ್ಲಿನ ಮೇಲೆ ಹತ್ತಿ ತ್ರಿಶೂಲ ಬಿಳಿಸಿದೆ. ಇಲ್ಲಿನ ಮೈಲಾರಲಿಂಗೇಶ್ವರನ ಕಾರ್ಣಿಕ ಈಡಿ ದೇಶ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

