ಬೆಂಗಳೂರು : ಕನ್ನಡ ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಸಮನ್ವಿ(6) ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಮನ್ವಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಟಿಪ್ಪರ್ ಲಾರಿ, ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತವಾದ ಹಿನ್ನಲೆ ಈ ಘಟನೆ ನಡೆದಿದೆ.
ಬಾಲಕಿಯ ತಾಯಿ ಅಮೃತಾ ನಾಯ್ಡು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಮನ್ವಿ ಮರಣದ ಕುರಿತು ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಆ ಸ್ಥಳದಲ್ಲಿ ಇದ್ದ ವ್ಯಕ್ತಿಗಳು ಘಟನೆ ಬಗ್ಗೆ ವಿವರಿಸಿದ್ದಾರೆ. ‘ನಾವು ಡಿ ಮಾರ್ಟ್ ಬಳಿ ನಿಂತಿದ್ದೆವು. ಆಗ ಮೆಟ್ರೋ ಸ್ಟೇಷನ್ ಬಳಿಕ ಒಂದು ಲಾರಿ ಮತ್ತು ಟಾಟಾ ಸುಮೋ ಕಾರಿನವರು ನಿಂತು ಮಾತನಾಡುತ್ತಿದ್ದರು. ಜನರೆಲ್ಲ ಸೇರಿ ಅದರ ವ್ಹೀಲ್ ಚೆಕ್ ಮಾಡುತ್ತಿದ್ದರು. ಪೊಲೀಸ್ನವರು ಇನ್ನೂ ಬಂದಿರಲಿಲ್ಲ. ತಾಯಿ-ಮಗಳು ಸ್ಕೂಟರ್ನಲ್ಲಿ ಬರುವಾಗ ಲಾರಿಗೆ ಸ್ವಲ್ಪ ಟಚ್ ಆಯಿತಂತೆ. ಆ ಬಗ್ಗೆ ಪಕ್ಕಾ ಮಾಹಿತಿ ನಮಗೆ ಗೊತ್ತಿಲ್ಲ. ಮಹಿಳೆ ಎಡಗಡೆಗೆ ಬಿದ್ದರು. ಮಗು ಲಾರಿ ಮುಂದೆ ಬಿತ್ತು ಅಂತ ಜನ ಹೇಳ್ತಾರೆ. ಆಗ ಆಕೆಗೆ ಪ್ರಜ್ಞೆ ತಪ್ಪಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

