
ಧಾರವಾಡ: ಜೀವನಕ್ಕೆ ಬೇಕಾದ ಕೌಶಲ್ಯಗಳನ್ನು ಒದಗಿಸುವ ಸಾಮಥ್ರ್ಯ ನಾಟಕಗಳಲಿತ್ತು. ರಂಗರೂಪ ಆಗಿನ ಕಾಲದಲ್ಲಿ ಮನರಂಜನೆಯ ಜೊತೆಗೆ ಜೀವನದ ಅನುಭವದ ಸಾರವನ್ನು ತಿಳಿಸುವ ಕೇಂದ್ರವಾಗಿತ್ತು ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಬಸವರಾಜ ಬೇವಿನಗಿಡದ ಅವರು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನದಲ್ಲಿ ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ಅಂದಿನ ಕಾಲದಲ್ಲಿ ನಾಟಕಗಳೇ ಸಾಹಿತ್ಯದ ಭಂಡಾರವಾಗಿತ್ತು. ವ್ಯಂಗ್ಯ, ಸುಖಾಂತ್ಯ, ದುಃಖ, ಸಾಮಾಜಿಕ ಕಳಕಳಿ ಮಂತಾದ ಅಂಶಗಳನ್ನು ನಾಟಕಗಳಲ್ಲಿ ಕಾಣಬಹುದು. ಭಾರತೀಯ ಹಾಗೂ ಕನ್ನಡ ರಂಗಪರಂಪರೆಗೆ ಇತಿಹಾಸವಿದೆ. ಕನ್ನಡ ರಂಗಭೂಮಿಯು ಜನಪದದಿಂದ ಪ್ರಭಾವಿತಗೊಳಪ್ಪಟ್ಟು, ಜನಪದ ಸೊಗಡಿನಿಂದ ಕೂಡಿದ ಹಲವಾರು ನಾಟಕಗಳು ಜನರಲ್ಲಿ ತಿಳುವಳಿಕೆಯನ್ನು ಮೂಡಿಸಿವೆ ಎಂದು ಹೇಳಿದರು.

ರಂಗಸಮಾಜ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಮಾತನಾಡಿ, ಆಧುನಿಕ ಯುಗದಲ್ಲಿ ಜನಪದ ಕಲೆಗಳಲ್ಲಿ ತೊಡಗಿಕೊಂಡು ಅವುಗಳನ್ನು ನಾಟಕಗಳ ಮುಖಾಂತರ ಉಳಿಸಿಕೊಂಡು ಹೋಗುವುದು ಮುಖ್ಯವಾಗಿದೆ. ಮಹಾಭಾರತ ಮತ್ತು ರಾಮಾಯಣಗಳ ಸನ್ನಿವೇಶಗಳನ್ನು ಬಯಲಾಟಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಸಾಮಾಜಿಕ ಹಾಗೂ ಗಂಭೀರತೆಯ ಕುರಿತು ಮನರಂಜನೀಯವಾಗಿ ಜನರಿಗೆ ತಿಳಿಸುವ ಕಾರ್ಯವನ್ನು ಬಯಲಾಟಗಳು ಮಾಡುತ್ತಿವೆ ಎಂದು
bigtvnews | Hubli Dharwad News | Kannada News | Karnataka News Hubli News | News In Hubli | Local news





