ಬೆಳಗಾವಿ; ಜಿಲ್ಲೆಯ ರಾಮದರ್ಗ ತಾಲ್ಲೂಕಿನ ಕಾಲೇಜ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಸಂಭವಿಸಿದೆ, ಕ್ಷುಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ಈ ಗಲಾಟೆ ನಡದಿದೆ , ಈ ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಲಿಸ್ ಇಲಾಖೆಯ ಎಸ್.ಐ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ, ಕಾಲೇಜು ಆವರಣದಲ್ಲಿ ಮೊದಲು ಪ್ರಾರಂಭವಾದ ಜಗಳವನ್ನು ಬಗೆಹರಿಸಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಮನೆಗೆ ಹೋಗುವಂತೆ ಹೇಳಿದ್ದಾರೆ , ತದನಂತರದಲ್ಲಿ ಎರಡು ಗುಂಪಿನ ಕಾಲೇಜು ವಿದ್ಯಾರ್ಥಿಗಳು ರಾಮದುರ್ಗ ಬಸ್ ನಿಲ್ದಾಣದಲ್ಲಿ ಮತ್ತೆ ಜಗಳ ಪ್ರಾರಂಭ ಮಾಡಿದ್ದಾರೆ.

ನಂತರ ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್ ಸಿಬ್ಬಂದಿಗಳು ಜಗಳ ಬಗೆಹರಿಸಲು ಮುಂದಾಗಿದ್ದಾರೆ. ಆದರೆ ವಿಕೋಪದಲ್ಲಿ ವಿದ್ಯಾರ್ಥಿಗಳ ನಡುವೆ ಸಿಲುಕಿದ ಅಧಿಕಾರಿಗೆ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ರಾಮದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ವಿಚಾರಣೆಯಲ್ಲಿ ಇದೆ , ಘಟನೆ ಸಂಭಂದಿಸದಂತೆ ಕೇಲ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





