Breaking News

ಪ್ರಕಾಶ್ ಟ್ರಾವೆಲ್ಸ್​ಬಸ್ ನ ಮಾಲೀಕರಾದ ಪ್ರಕಾಶ್ ಕಾಣೆ : ಕಾರು ಸೇತುವೆ ಬಳಿ ಪತ್ತೆ



ಶಿವಮೊಗ್ಗ: ಪ್ರಕಾಶ್ ಟ್ರಾವೆಲ್ಸ್​ಬಸ್ ನ ಮಾಲೀಕರಾದ ಪ್ರಕಾಶ್ ಎಂಬುವರು ಕಾಣೆಯಾಗಿದ್ದು, ಅವರ ಕಾರು ಹಾಗೂ ಮೊಬೈಲ್ ಹೊಸನಗರದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿದೆ.

ಸಾಗರ ನಿವಾಸಿಯಾಗಿರುವ ಪ್ರಕಾಶ್, ಮೊನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಮನೆಗೆ ವಾಪಸ್ ಆಗಿರಲಿಲ್ಲ. ಮೊಬೈಲ್ ಮಾತ್ರ ರಿಂಗ್ ಆಗ್ತಾ ಇತ್ತು.‌ ಇನ್ನು ಕಾರು ಬೆಳಗ್ಗೆಯಿಂದ ಪಟಗುಪ್ಪೆ ಸೇತುವೆ ಮೇಲೆ‌ ನಿಂತಿದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕಾರು ಹಾಗೂ ಮೊಬೈಲ್ ಸಾಗರದ ಪ್ರಕಾಶ್ ರದ್ದು ಎಂದು ತಿಳಿದು ಬಂದಿದೆ. ಕಾರು ಪತ್ತೆಯಾಗಿದೆಯಾದ್ರೂ ಮಾಲೀಕ ಪ್ರಕಾಶ್ ಪತ್ತೆಯಾಗಿಲ್ಲ.‌ ಈ ಕುರಿತು ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *