Breaking News

50 ಲಕ್ಷ ಇನ್ಷುರೆನ್ಸ್ ಹಣ, ಮೂವರು ಇಟ್ಟರು ಮುಹೂರ್ತ, ಸತ್ತವನೇ‌ ಕೊಲೆಗಾರ, ಕೊಲೆಗಾರನೇ ಸತ್ತಿದ್ಹೇಗೆ?

ಹುಬ್ಬಳ್ಳಿಯ
ದುಡ್ಡು ಮಾಡೋ ಖಯಾಲಿಗೆ ಬಿದ್ರೇ ಮುಗೀತು, ಅಂಥವರು ಯಾವ್ದಕ್ಕೂ ಹೇಸೋದಿಲ್ಲ, ಹಿಂಜರಿಯೋದಿಲ್ಲ. ಯಾರ್ನ್ ಬೇಕಾದ್ರೂ ಕೊಲೆ ಮಾಡ್ತಾರೆ, ಸತ್ತವರನ್ನ ಬದುಕಿಸ್ತಾರೆ. ಬದುಕಿದವರನ್ನ ಸಲೀಸಾಗಿಯೇ ಮುಗಿಸ್ತಾರೆ. ಇಂಥವರು ಅಡ್ಡಕಸುಬಿಗಳು. ಆದ್ರೇ, ಯುವಕರೇ ಈಗೀಗ ದುಡ್ಡು ಮಾಡೋಕೆ ಎಂತೆಂಥಾ ಸಿನಿಮಾ ಸ್ಟೈಲ್ ನಲ್ಲಿಯೇ ಪ್ಲಾನ್ ಮಾಡ್ತಾರೆ. ನಾವ್ ಹೇಳ್ತಿರೋ ಕತೆ ಕೇಳಿದ್ರೇ ಒಂದ್ ಕ್ಷಣ ಅಚ್ಚರಿಗೊಳ್ತೀರಾ ನೀವೂ.
ಈ ಫೋಟೋದಲ್ಲಿರೋ ಐನಾತಿಯನ್ನೊಮ್ಮೆ ನೋಡ್ಬಿಡಿ. ಮೈಮುರಿದೋ ಇಲ್ಲ ನ್ಯಾಯವಾಗಿಯೋ ದುಡಿದ್ ತಿನ್ನೋಕ್ ಏನ್ ಕಷ್ಟ ಈ ದಂಡಪಿಂಡದಂಗಿರೋ ಇವನಿಗೇ.. ಆದ್ರೇ, ದಿಢೀರ್ ದುಡ್ಡು ಮಾಡೋ ಹುಚ್ಚಿಗೆ ಬಿದ್ಬಿಟ್ಟಿದ್ದ ಇವನು.. ಇವನ ಹೆಸರು ಸಂಜೀವಕುಮಾರ ಬೆಂಗೇರಿ. ಹುಬ್ಬಳ್ಳಿಯ ಗೋಕುಲ ಗ್ರಾಮದ ನಿವಾಸಿ ಸಂಜೀವ ಮೊನ್ನೆ ತಾನೇ ರೇವಡಿಹಾಳ ಕ್ರಾಸ್ ಬಳಿ ರಸ್ತೆ ಅಪಘಾತದಲ್ಲಿ ಸತ್ತಿದ್ದ. ಊರ ಜನ ಅಷ್ಟೇ ಯಾಕೆ.. ಸ್ವತಃ ಸಂಜೀವಕುಮಾರ ಸಂಬಂಧಿಕರೇ ರಸ್ತೆಯಲ್ಲಿ ಬಿದ್ದಿರೋದು ಸಂಜೀವ ಅಂತಾನೇ ಅಂದ್ಕೊಂಡಿದ್ರು. ಆದ್ರೇ, ಇದು ರಸ್ತೆ ಅಪಘಾತವಲ್ಲ ಕೊಲೆ ಅಂತ ಆರೋಪಿಸಿ ಗೋಕುಲರಸ್ತೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿದ್ರು. ಮೊದಲಿಗೆ ಸತ್ತವರು ತನ್ನ ಸೋದರ ಸಂಜೀವಕುಮಾರ ಅಂತಾನೇ ಮಂಜುನಾಥ ಬೆಂಗೇರಿ ದೂರು ದಾಖಲಿಸಿದ್ರು. ಆದ್ರೀಗ ಇದೇ ಕೊಲೆ ಈಗ ಟ್ವಿಸ್ಟ್ ಅಂಡ್ ಟರ್ನ್ಸ್ ಪಡೀತಿದೆ. ಸಂಜೀವ ಸತ್ತಿದಾನೆ ಅಂತ ಎಲ್ರೂ ತಿಳ್ಕೊಂಡಿದ್ರು. ಆದ್ರೇ, ಅದೇ ಸಂಜೀವ ಬದುಕಿದಾನೆ. ಈಗ ನಾಪತ್ತೆಯಾಗಿದಾನೆ. ಇನ್ನೂ ಆಘಾತಕಾರಿ ಅಂದ್ರೇ ಅದೇ ಸಂಜೀವ ಅಂಡ್ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದ್ರು.  ಇದ್ಯಾವುದೇ ಸಿನಿಮಾ ಕತೆಯಂತೆ ರೋಚಕ ಅನ್ನಿಸ್ತಿಲ್ವಾ. ಹೌದು ಕಣ್ರೀ.. ಇದು ಸಿನಿಮಾ ಸ್ಟೈಲ್ ನಲ್ಲಿಯೇ ನಡೆದ ಕೊಲೆ. ಮೊನ್ನೆ ರಾತ್ರಿ ಹುಬ್ಬಳ್ಳಿ ಹೊರವಲಯದ ರೇವಡಿಹಾಳ ಕ್ರಾಸ್ ನ ಹೆದ್ದಾರಿ ಬಳಿ ಭೀಕರ ಅಪಘಾತ ನಡೆದ ರೀತಿಯೇ ಸೀನ್ ಕ್ರಿಯೇಟ್ ಮಾಡಲಾಗಿತ್ತು. ಮುಖದ ಗುರುತೇ ಸಿಗದಂತೆ, ಆದ್ರೇ, ಸ್ಥಳದಲ್ಲಿದ್ದ ಬಟ್ಟೆ,  ಚಪ್ಪಲಿ, ಬೈಕ್ ಇವುಗಳನ್ನೆಲ್ಲ ಕಂಡಿದ್ದ ಊರ ಜನ ಮತ್ತು ಸಂಬಂಧಿಕರು ಇದು ಸಂಜೀವಕುಮಾರ ಬೆಂಡಿಗೇರಿ ದೇಹವೇ ಅಂತ ಗುರುತು ಹಿಡಿದಿದ್ರು. ಆದ್ರೇ, ಮುಖ ಮಾತ್ರ ಗುರುತೇ ಸಿಗದಂತಾಗಿತ್ತು. 
ರಾಜೇಶ, ಸಂಜೀವಕುಮಾರ ಸಂಬಂಧಿ
ಆದ್ರೇ, ಗೋಕುಲ ರಸ್ತೆ ಪೊಲೀಸರು ಕಂಪ್ಲೇಂಟ್ ದಾಖಲಿಸಿಕೊಂಡು, ಡೆಡ್ ಬಾಡಿ ಬಿದ್ದ ಸ್ಥಳ ಪರಿಶೀಲಿಸಿದಾಗ, ಇದು ಪ್ರೀಪ್ಲಾನ್ ಮರ್ಡರ್ ಅನ್ನೋದು ಕನ್ಫರ್ಮಾಗಿತ್ತು. ತನಿಖೆಯ ಕೈಗೆತ್ತಿಕೊಂಡಾಗಲೇ, ಸತ್ತವನು ಸಂಜುಕುಮಾರ್ ಬೆಂಗೇರಿನಾ ಅನ್ನೋ ಬಗೆಗೆ ಡೌಟ್ ಸ್ಟಾರ್ಟಾಗಿತ್ತು. ಆದ್ರೇ, ಮೃತದೇಹದ ಮೇಲಿದ್ದ ಬಟ್ಟೆ, ಹೇರ್ ಸ್ಟೈಲ್ ಜತೆಗೆ ಬೈಕ್ ಕೂಡ ಸಂಜೀವನದೇ ಆಗಿತ್ತು. ಸಂಜೀವ ತನ್ನ ಕೈಮೇಲೆ ಹಚ್ಚೆ ಹಾಕಿಸ್ಕೊಂಡಿದ್ದ. ಅದೇ ಹಚ್ಚೆ ಡೆಡ್ ಬಾಡಿ ಮೇಲಿರಲಿಲ್ಲ. ಇದನ್ನ ಸಂಜೀವ ಸಂಬಂಧಿಕರೇ ಪೊಲೀಸರಿಗೆ ತಿಳಿಸಿದ್ರು. ಆಗ ಖಾಕಿಗೆ ಮತ್ತಷ್ಟು ತಲೆನೋವಾಗ್ಬಿಡ್ತು. ಸಂಜೀವಕುಮಾರ ಖಾಸಗಿ ಬ್ಯಾಂಕ್ ವೊಂದರಲ್ಲಿ 50 ಲಕ್ಷ ರೂ.ಗೆ ತನ್ನ ಹೆಸರಿನಲ್ಲಿ ಇನ್ಯುರೆನ್ಸ್ ಮಾಡಿಸಿದ್ದ. ಅದೇ ಹಣ ಪಡೆಯೋದಕ್ಕಾಗಿಯೇ ಅಪಘಾತದಲ್ಲಿ ಸಂಜೀವ ಸತ್ತಿದಾನೆ ಅಂತ ನಂಬಿಸೋದಕ್ಕೆ ಮಾಸ್ಟರ್ ಪ್ಲಾನ್ ಮಾಡ್ಕೊಂಡಿದ್ದ.  ತನ್ನ ಸ್ನೇಹಿತರಾದ ಮಹಾಂತೇಶ್ ದುಗ್ಗಾನಿ ಹಾಗೂ ಅಮೀರ್ ಶೇಖ್ ನೆರವು ಪಡ್ಕೊಂಡಿದ್ದ. ಈ ಮೊದಲು ಈ ಮೂವರು ಇಬ್ಬರನ್ನ ಕೊಲೆ ಮಾಡೋಕೆ ಟ್ರೈ ಮಾಡಿದಾರೆ. ಆದ್ರೇ, ಆ ಮುಹೂರ್ತ ಯಾಕೆ ಸ್ವಲ್ಪದರಲ್ಲೇ ಮಿಸ್ಸಾಗಿತ್ತು. ಅಪರಿಚಿತ ಯುವಕನಿಗೆ ಹೇರ್ ಸ್ಟೈಲ್ ಕೂಡ ಥೇಟ್ ಸಂಜೀವ ರೀತಿಯೇ ಮಾಡಿಸಲಾಗಿದೆ. ರೇವಡಿಹಾಳದ ಹೊಲವೊಂದರಲ್ಲಿ ಕೊಂದ ಮೇಲೆ ಆತನಿಗೆ ಸಂಜೀವನ ಬಟ್ಟೆ ತೊಡಿಸಿದಾರೆ.  ಮುಖ ಗೊತ್ತೇ ಆಗದಂತೆ ಮಾಡಿದಾರೆ. ಬಳಿಕ ಹೈವೇನಲ್ಲಿ ಬೈಕ್ ಜತೆಗೆ ಅಪರಿಚಿತ ಯುವಕನ ಬಾಡಿ ಎಸೆದಿದಾರೆ. ಸಾಲದ್ದಕ್ಕೆ ಗುರುತು ಸಿಗದಿರಲಿ ಅಂತ ದೇಹದ ಮೇಲೆ ಟ್ರ್ಯಾಕ್ಟರ್ ಕೂಡ ಹತ್ತಿಸಿದಾರೆ. ಇದಿಷ್ಟಾದ್ಮೇಲೆ ಮೂವರು ಕೊಲೆ ಪಾತಕಿಗಳು ಅಲ್ಲಿಂದ ಜಾಗ ಖಾಲಿ ಮಾಡಿದಾರೆ. ಎಂ.ಎನ್ ನಾಗರಾಜ, ನಗರ ಪೊಲೀಸ್ ಆಯುಕ್ತ, ಹುಬ್ಬಳ್ಳಿ-ಧಾರವಾಡ ಮಹಾನಗರ
ಸತ್ತವನು ಸಂಜೀವಕುಮಾರ ಬೆಂಗೇರಿ ಅಲ್ಲ ಅನ್ನೋದು ಕನ್ಫರ್ಮಾಗ್ತಿದ್ದಂತೆಯೇ ಗೋಕುಲ್ ಠಾಣೆ ಇನ್ಸ್ ಪೆಕ್ಟರ್ ನಿಂಬಾಳಕರ್ ಮತ್ತವರ ತಂಡ ಮಹಾಂತೇಶ್ ದುಗ್ಗಾನಿ ಹಾಗೂ ಅಮೀರ್ ಶೇಖ್ ವಶಕ್ಕೆ ಪಡೆದಿದಾರೆ.  ಪೊಲೀಸರು ತಮ್ಮದೇ ಭಾಷೆ ಬಳಸಿದಾಗ ಆರೋಪಿಗಳು ತಾವು ನಡೆಸಿದ ಕೊಲೆ ಬಗೆಗೆ ಒಂದೊಂದಾಗಿ ಎಳೆಎಳೆಯಾಗಿ ಎಲ್ಲವನ್ನೂ ಬಿಡಿಸಿದಾರೆ.  ಡಿಸಿಪಿ ಬಿ.ಎಸ್ ನೇಮಗೌಡ, ಎಸಿಪಿ ಪಠಾಣ ನೇತೃತ್ವದಲ್ಲಿ ಗೋಕುಲ್ ರಸ್ತೆ ಪೊಲೀಸರು ನಿಜಕ್ಕೂ ಇಡೀ ಪ್ರಕರಣವನ್ನ 48 ಗಂಟೆಯೊಳಗೆ ಬಯಲಿಗೆಳೆದು, ಪೊಲೀಸರ ಬಗೆಗೆ ಜನರ ನಂಬಿಕೆಯನ್ನ ಬಲಗೊಳ್ಳುವಂತೆ ಮಾಡಿದಾರೆ.
ಎಂ.ಎನ್ ನಾಗರಾಜ, ನಗರ ಪೊಲೀಸ್ ಆಯುಕ್ತ, ಹುಬ್ಬಳ್ಳಿ-ಧಾರವಾಡ ಮಹಾನಗರ
ತಾನೇ ಸತ್ತಂತೆ ಸೀನ್ ಕ್ರಿಯೇಟ್ ಮಾಡಿ ಇನ್ಯಾವುದೋ ಯುವಕನನ್ನ ಕೊಲೆ ಮಾಡಿದ ಮಾಸ್ಟರ್ ಮೈಂಡ್ ಸಂಜೀವಕುಮಾರ ಬೆಂಡಿಗೇರಿ ಈಗ ಎಸ್ಕೇಪಾಗಿದಾನೆ. ಕೊಲೆಯಾದ ಯುವಕ ಯಾರು, ಕೊಲೆ ಮಾಡಿದ ಸಂಜೀವ ಎಲ್ಲಿಗೆ ಹೋಗಿದ್ರೂ ಇವತ್ತಿಲ್ಲ ನಾಳೆ ಸಿಗಲೇಬೇಕು ಹಿಡಿದು ತಂದೇ ತರ್ತೀವಿ ಅಂತಿದಾರೆ ಪೊಲೀಸರು. ಆದ್ರೇ, ಏನ್ ಗೊತ್ತಾ.. 50 ಲಕ್ಷ ವಿಮಾ ಹಣ ಎಬ್ಬಿಸೋಕೆ ಹೋದ ಸಂಜೀವಕುಮಾರ ಅಂಡ್ ಫ್ರೆಂಡ್ಸ್ ತಮ್ಮ ಬಾಳಿಗೆ ಕಲ್ಲುಚಪ್ಪಡಿ ಹಾಕ್ಕೊಂಡಿದಾರೆ. ಏನೂ ಮಾಡದ ಯುವಕನ ಕತೆಯನ್ನೂ ಮುಗಿಸಿದಾರೆ.  ಇಂಥ ಮಕ್ಕಳನ್ನ ಪಡೆದ ಹೆತ್ತವರು ಸಮಾಜದ ಎದುರಿಗೆ ತಲೆ ಎತ್ತಿ ಬದುಕೋದಾದ್ರೂ ಹೇಗೆ ಹೇಳಿ.. ಥೂ ಇವರ ಜನ್ಮಕ್ಕೇ..    ಎಂ   ಶೇಖ್    ಬಿಗ್  ಟಿವಿ ನ್ಯೂಸ್   ಹುಬ್ಬಳ್ಳಿ
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *