Breaking News

ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಊರ ಜಾತ್ರೆಯ ವೇಳೆ ಅಟ್ಟಾಡಿಸಿ ವ್ಯಕ್ತಿಯ ಬರ್ಬರ ಹತ್ಯೆ!

ಹಳೆ ವೈಷಮ್ಯ ಹಿನ್ನೆಲೆ ಊರ ಜಾತ್ರೆಯ ವೇಳೆ ಅಟ್ಟಾಡಿಸಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹನುಮಂತಯ್ಯನಪಾಳ್ಯದಲ್ಲಿ ಈ ಒಂದು ಕೊಲೆ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ರಾಮಾಂಜಿನಪ್ಪ (45) ಎಂದು ತಿಳಿದುಬಂದಿದೆ. ಕೊಲೆಗೈದ ಬಳಿಕ ಬೈಕ್ ಸಮೇತ ಗುಡ್ಡದ ಬಳಿ ಆರೋಪಿಗಳು ರಾಮಾಂಜಿನಪ್ಪ ಶವ ಎಸೆದು ಪರಾರಿಯಾಗಿದ್ದಾರೆ. ರಸ್ತೆ ಬದಿ ಬಿದ್ದಿದ್ದ ಬೈಕ್ ಪರಿಶೀಲನೆ ಮಾಡಿದಾಗ ಶವ ಪತ್ತೆಯಾಗಿದೆ. ಘಟನೆ ಕುರಿತಂತೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *