Breaking News

ಗೋವಾ ಕಾಂಗ್ರೆಸ್‌ನ 12 ಶಾಸಕರು ಹೊರಬರಲು ತಯಾರಾಗಿದ್ದಾರೆ


ಕೋಲಾರ: ಗೋವಾ ಕಾಂಗ್ರೆಸ್‌ನ 12 ಶಾಸಕರು ಗಂಟು‌ಮೂಟೆ ಕಟ್ಟಿಕೊಂಡು ಹೊರಬರಲು ತಯಾರಾಗಿದ್ದಾರೆ. ಕರ್ನಾಟಕದಲ್ಲೂ ಹಲವರು ಸಂಪರ್ಕದಲ್ಲಿದ್ದು, ಟೆಂಟ್‌ ಸಮೇತ ಕಿತ್ತುಕೊಂಡು ಬರಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಅವರ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ‌ದ ಅವರು, ‌ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಗೂಟ ಇಟ್ಟುಕೊಂಡು ಬಡಿದಾಡಬೇಕು ಅಷ್ಟೆ ಎಂದು ಹೇಳಿದರು.’ರಾಜ್ಯದಲ್ಲೂ ರಾಜಕೀಯ ಧ್ರುವೀಕರಣ ನಡೆಯಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ತಿರುಕನ ಕನಸು ಕಾಣುತ್ತಿದ್ದು, ಎಂದೂ ನನಸು ಆಗುವುದಿಲ್ಲ. ಈಗಲೇ ಆ ಇಬ್ಬರ ನಡುವೆ ಸಿ.ಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ’ ಎಂದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *