ಹುಬ್ಬಳ್ಳಿ : ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು. ಇದಿ ನನ್ನ ಅಭಿಪ್ರಾಯ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ನನ್ನ ಪ್ರಕಾರ ಇದು ಇನ್ ಕನ್ವಿನೆಂಟ್ ಆಗುತ್ತೆ. ಆಡಳಿತ ಅಭಿವೃದ್ಧಿ ದೃಷ್ಟಿಯಿಂದ ಆಯಾ ಜಿಲ್ಲೆಯವರಿಗೆ ನೀಡಿದ್ರೆ ಒಳ್ಳೆದಾಗುತ್ತಿತ್ತು. ನಾನು ಈಗಾಗಲೇ ಸಿಎಂ ಗಮನಕ್ಕೂ ತಂದಿದ್ದೇನೆ. ಆದ್ರೆ ಪಕ್ಷದ ಪಾಲಿಸಿ,ಪ್ರಯೋಗವಿದೆ. ನೋಡೋಣ ಇದು ಯಾವ ರೀತಿ ಪರಿಣಾಮ ಬೀರುತ್ತೆ ಎನ್ನೋದು ಗೊತ್ತಾಗುತ್ತೆ. ಅದನ್ನ ನೋಡಿಕೊಂಡು ಪಕ್ಷದ ವರಿಷ್ಠರ ಜೊತೆ ಮಾತನಾಡುತ್ತೇವೆ. ಆದ್ರೆ ಬೇರೆ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಿದ್ದು ಸರಿಯಲ್ಲ ಎಂದರು.
ಬಿಜೆಪಿಯ ಕೆಲ ಶಾಸಕರು ನನ್ನ ಸಂರ್ಪಕದಲ್ಲಿದ್ದಾರೆ ಎನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಮ್ನೆ ಹುಳ ಬಿಡೋ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಅದು ನಿಜವಾಗಿದ್ರೆ ಹೆಸರು ಬಹಿರಂಗ ಪಡಿಸಲಿ. ಧೈರ್ಯವಿದ್ರೆ ಹೆಸರು ಬಹಿರಂಗ ಪಡಿಸಿಲಿ. ಕದ್ದು ಮುಚ್ಚಿ ಮಾಡೋದ ಅವಶ್ಯಕತೆವಿಲ್ಲ. ಈ ರೀತಿ ಹೇಳಿ ಬಿಜೆಪಿ ಬಗ್ಗೆ ನೆಗಿಟಿವಿಟಿ ಕ್ರಿಯೇಟ್ ಮಾಡ್ತಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರೋಕೆ ಹೊರಟಿರೋರು ಮುರ್ಖರು.
ಕಾಂಗ್ರೆಸ್ ನ್ನ ದೇಶದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಬೇಕಿದೆ. ಬಿಜೆಪಿಯನ್ನ ಅಲುಗಾಡಿಸೋಕೆ ಯಾರಿದಂದಲೂ ಸಾಧ್ಯವಿಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

