ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕರ ವಿರುದ್ದ ಕಾನೂನು ಸಮರ ಸಾರಿದ್ದಾರೆ. ಸ್ಮೃತಿ ಇರಾನಿ ಪುತ್ರಿ ಜೋಯಿಸ್ ಇರಾನಿ ಗೋವಾದಲ್ಲಿ ಸತ್ತವರ ಹೆಸರಲ್ಲಿ ಲೈಸೆನ್ಸ್ ಪಡೆದು, ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಈ ಆರೋಪ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿಸೋಜಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಲಿಖಿತವಾಗಿಯೇ ಬೇಷರತ್ ಕ್ಷಮೆಯಾಚಿಸಬೇಕೆಂದು ಈ ನೋಟಿಸ್ ಮೂಲಕ ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





