Breaking News

ಹೊಸ ವರ್ಷದ ಬಜೆಟ್ ನಲ್ಲಿ ಯಾವ ವಸ್ತು ದುಬಾರಿ, ಯಾವುದು ಅಗ್ಗ ಪಟ್ಟಿ ಇಲ್ಲಿದೆ ನೋಡಿ

ಇಂದು ಬಜೆಟ್ ಮಂಡನೆ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. 2022-23ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವರು ಪ್ರಸ್ತಾಪಿಸಿದಂತೆ, ಮೊಬೈಲ್ ಫೋನ್‌ಗಳು ಮತ್ತು ಮೊಬೈಲ್ ಫೋನ್ ಚಾರ್ಜರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯವಾಗಿ ಬಳಸುವ ವಸ್ತುಗಳು ಅಗ್ಗವಾಗಲಿವೆ. ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು ಹಾಗೂ ರತ್ನದ ಕಲ್ಲುಗಳ ಮೇಲಿನ ಸೀಮಾ ಸುಂಕವನ್ನು ಶೇ 5ಕ್ಕೆ ಇಳಿಸಲಾಗಿದೆ. ಆ ನಂತರದಲ್ಲಿ 350ಕ್ಕೂ ಹೆಚ್ಚು ಸೀಮಾ ಸುಂಕ ವಿನಾಯಿತಿಗಳನ್ನು ಹಂತಹಂತವಾಗಿ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಭಾರತದಲ್ಲಿ ಉತ್ಪಾದನೆ ಆಗುವ ಕೃಷಿ ವಲಯಕ್ಕೆ ಸಂಬಂಧಿಸಿದ ಉಪಕರಣಗಳ ಮೇಲಿನ ವಿನಾಯಿತಿಯ ವಿಸ್ತರಣೆಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ.

ಹಣಕಾಸು 2023ರಲ್ಲಿ ಅಗ್ಗದ ಮತ್ತು ದುಬಾರಿಯಾಗುವ ವಸ್ತುಗಳ ಪಟ್ಟಿ ಇಲ್ಲಿದೆ ನೋಡಿ

ಅಗ್ಗ ವಸ್ತು ಗಳು

– ಬಟ್ಟೆ

-ಎಲೆಕ್ಟ್ರಾನಿಕ್ ವಸ್ತುಗಳು

– ಆಭರಣ ವಸ್ತುಗಳು

– ಕೈಗಡಿಯಾರಗಳು

– ಚರ್ಮದ ವಸ್ತುಗಳು

– ಕೃಷಿ ಉಪಕರಣಗಳು

– ರತ್ನದ ಕಲ್ಲುಗಳು ಮತ್ತು ವಜ್ರಗಳು

– ತದ್ರೂಪಿ ಅಥವಾ ಅನುಕರಣೆ ಆಭರಣ

– ಮೊಬೈಲ್ ಫೋನ್‌ಗಳು

– ಮೊಬೈಲ್ ಫೋನ್ ಚಾರ್ಜರ್‌ಗಳು

– ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳು

– ಮೆಥನಾಲ್ ಸೇರಿದಂತೆ ಕೆಲವು ರಾಸಾಯನಿಕಗಳು ಮೇಲಿನ ಕಸ್ಟಮ್ ಸುಂಕಗಳು

– ಸ್ಟೀಲ್ ಸ್ಕ್ರ್ಯಾಪ್

ದುಬಾರಿ ವಸ್ತುಗಳು

– ಎಲ್ಲ ಆಮದು ವಸ್ತುಗಳು

– ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ

– ಛತ್ರಿಗಳ ಮೇಲಿನ ಸುಂಕ ಹೆಚ್ಚಳ

Share News

About admin

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *