Breaking News

ಕಾರವಾರ: ಆನ್‌ಲೈನ್ ಉಡುಗೊರೆ ನೆಪದಲ್ಲಿ ವಂಚನೆ

ಆನ್‌ಲೈನ್ ಶಾಪಿಂಗ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ ₹1.37 ಲಕ್ಷ ವಂಚಿಸಿದ್ದಾಗಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುದಗಾದ ಸೀಬರ್ಡ್ ಕಾಲೊನಿಯ ಸಚಿನ್ ದುರ್ಗೇಕರ ವಂಚನೆಗೆ ಒಳಗಾದವರು. ಅ.25ರಂದು ಆನ್‍ಲೈನ್ ಮೂಲಕ ವಸ್ತುವೊಂದನ್ನು ಖರೀದಿಸಿದ್ದ ಅವರಿಗೆ ಕೆಲ ದಿನಗಳ ಬಳಿಕ ಖರೀದಿಗೆ ವಿಶೇಷ ಉಡುಗೊರೆ ಇದೆ ಎಂದು ನಂಬಿಸಿದ್ದ ವಂಚಕರು ಲಿಂಕ್ ಕಳಿಸಿದ್ದರು.ಅದರಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಭರಿಸಲು ಸೂಚಿಸಿದ್ದರು. ಇದನ್ನು ನಂಬಿದ ಸಚಿನ್ ವಂಚಕರ ಸೂಚನೆ ಪಾಲಿಸಿದ್ದರು. ಅವರ ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳಿಂದ ಹಣ ಅಪರಿಚಿತರ ಖಾತೆಗೆ ವರ್ಗಾವಣೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *