ಚಿತ್ತೂರ್ ಗಢ್ : ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ಮಗುಚಿ ಬಿದ್ದಿದೆ. 9 ಮಹಿಳೆಯರು ಸೇರಿದಂತೆ 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಉದಯ್ಪುರ ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಡೆದಿದೆ.
ಪ್ರಯಾಣಿಕರ ಪೈಕಿ 17 ಜನರು ಗಾಯಗೊಂಡಿದ್ದಾರೆ. 9 ಮಹಿಳೆಯರೂ ಇದರಲ್ಲಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ತಾನದ ಉದಯ್ಪುರ ಮಾರ್ಗವಾಗಿ ಗುಜರಾತ್ನ ರಾಜ್ಕೋಟ್ನಿಂದ ಮಧ್ಯಪ್ರದೇಶದ ಬಿಂದ್ಗೆ ಪ್ರಯಾಣಿಸುತ್ತಿತ್ತು. ಬಸ್ ಮಗುಚಿ ಬಿದ್ದು ಪ್ರಯಾಣಿಕರು ಕಿರುಚಾಡಲು ಶುರು ಮಾಡಿದಾಗ ಅಲ್ಲಿಯೇ ಇದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲದೇ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಯಂಬುಲೆನ್ಸ್ ಮತ್ತು ಖಾಸಗಿ ವಾಹನಗಳ ಮೂಲಕ ಗಾಯಾಳುಗಳನ್ನು ಉದಯ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

