ನವದೆಹಲಿ: ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಿಂದ ಆಧುನಿಕ ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ನವದಿಶೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್‌ಗೆ ಸಂಬಂಧಿಸಿ ನಡೆದ ವೆಬ್ ಗೋಷ್ಠಿಯಲ್ಲಿ ಪಾಲ್ಗೊಂಡು ಮೋದಿ ಮೇಲಿನಂತೆ ನುಡಿದರು. ಗತಿಶಕ್ತಿ ಯೋಜನೆಯನ್ನು ಕಳೆದ ವರ್ಷ ಘೋಷಿಸಲಾಗಿತ್ತು. ಯಾವುದೇ ಮೂಲಸೌಕರ್ಯ ನಿರ್ಮಾಣದ ವೇಳೆ ಬೇರೆಬೇರೆ ಇಲಾಖೆಗಳಿಂದ ಎದುರಾಗುವ ಅಡೆತಡೆಗಳನ್ನು ನಿವಾರಿಸಲು, ಅತ್ಯುತ್ತಮವಾದ, ಏಕೀಕೃತವಾದ ರೀತಿಯಲ್ಲಿ ಯೋಜನೆ ಮಾಡಿ, ಜಾರಿ ಮಾಡಲು ಇದನ್ನು ಆರಂಭಿಸಲಾಗಿದೆ. ಇದರ ಮೂಲಕ ಸರ್ಕಾರಿ-ಖಾಸಗಿ ಸಹಭಾಗಿತ್ವವೂ ಹೆಚ್ಚಲಿದೆ.
ಈ ವ್ಯವಸ್ಥೆಯ ಮೂಲಕ ಸರಿಯಾದ ಯೋಜನೆ, ಜಾರಿ, ನಿರ್ವಹಣೆ ಮಾಡಲು ಸಾಧ್ಯ. ಹಾಗೆಯೇ ಖರ್ಚು ಮತ್ತು ಸಮಯವನ್ನೂ ಉಳಿಸಬಹುದು ಎಂದಿದ್ದಾರೆ. ಈ ಯೋಜನೆಯಲ್ಲಿ ಉದ್ಯಮಿಗಳು ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕು, ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

