Breaking News

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಬಿಜೆಪಿ


ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ರಾಜ್ಯ ಬಿಜೆಪಿ ಕಿಡಿಕಾರಿದೆ. ಸಿದ್ದರಾಮಯ್ಯ ಅಡ್ಡಕಸುಬಿ ಬಜೆಟ್ ಎಂದು ಟ್ವೀಟ್ ಮೂಲಕ ಬಜೆಟ್ ಟೀಕಿಸಿದ್ದಾರೆ. ಸಿದ್ದರಾಮಯ್ಯ ಟೀಕೆಗೆ ರಾಜ್ಯ ಬಿಜೆಪಿ ಘಟಕ ಟಾಂಗ್ ಕೊಟ್ಟಿದೆ.

ರಾಜಕೀಯ ಟೀಕೆಗಳು ಮರ್ಯಾದೆಯ ಗೆರೆ ದಾಟಬಾರದು. ಆದರೆ ಸಿದ್ದರಾಮಯ್ಯ ಅವರು ರಾಜ್ಯದ ಆಯವ್ಯಯವನ್ನೇ ಅಡ್ಡಕಸುಬಿ ಬಜೆಟ್‌ ಎಂದು ವ್ಯಾಖ್ಯಾನಿಸಿದ್ದಾರೆ. ಪ್ರಜಾಪ್ರಭುತ್ವದ ರೀತಿ ರಿವಾಜುಗಳಿಗೆ ವಿರುದ್ಧವಾದ ಹೇಳಿಕೆಯನ್ನು ಸಿದ್ದರಾಮಯ್ಯರಿಂದ ರಾಜ್ಯದ ಜನರು ನಿರೀಕ್ಷಿಸಿರಲಿಲ್ಲ. ಇದು ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ಟೀಕಿಸಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಅವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ. ಬಜೆಟ್ ಬಗ್ಗೆ ಸಿದ್ರಾಮಯ್ಯ ಆಡಿದ ಮಾತು ಅವರ ಘನತೆಗೆ ತಕ್ಕುದಲ್ಲ. ಸಿದ್ದರಾಮಯ್ಯನವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ “ಅಡ್ಡಕಸುಬಿ” ಎಂದು ಯಾರಾದರೂ ಕರೆದರೆ, ನಿಮಗೆ ನೋವಾಗಬಹುದೇ? ಎಂದು ಪ್ರಶ್ನಿಸಿದೆ.

Share News

About admin

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *