Breaking News

ಇಬ್ಬರು ರೌಡಿಗಳ ಬಂಧನ: ಎರಡು ಪಿಸ್ತೂಲ್, ಮೂರು ಜೀವಂತ ಗುಂಡು ಜಪ್ತಿ

ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದ ಇಬ್ಬರು ರೌಡಿಗಳನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ ಸಿಬ್ಬಂದಿ ಬಂಧಿಸಿದ್ದಾರೆ.ನಾಗೇಂದ್ರ ಹಾಗೂ ಸುಹೈಲ್‌ ಖಾನ್ ಬಂಧಿತರು. ಬಂಧಿತರಿಂದ ಎರಡು ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ‘ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ನಾಗೇಂದ್ರನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ನಾಗೇಂದ್ರ ವಿರುದ್ಧ ರೌಡಿ ಪಟ್ಟಿಯನ್ನೂ ತೆರೆಯಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದು ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಬನ್ನೇರುಘಟ್ಟ ರಸ್ತೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪರವಾನಗಿ ಇಲ್ಲದ ಎರಡು ಪಿಸ್ತೂಲ್‌ ಹಾಗೂ ಮೂರು ಜೀವಂತ ಗುಂಡುಗಳನ್ನು ಇಟ್ಟಿದ್ದ ಆತ, ಪಿಸ್ತೂಲ್‌ ಹಿಡಿದು ಸಾರ್ವಜನಿಕರನ್ನೂ ಬೆದರಿಸುತ್ತಿದ್ದ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಹೊರರಾಜ್ಯದ ವ್ಯಕ್ತಿಯಿಂದ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಖರೀದಿಸಿರುವುದು ಗೊತ್ತಾಗಿತ್ತು‌. ಖಚಿತ ಮಾಹಿತಿ ಆಧರಿಸಿ ಹೊರರಾಜ್ಯದ ವ್ಯಕ್ತಿಯನ್ನೂ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *