Breaking News

ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ಯತ್ನಾಳ್


ಬೆಂಗಳೂರು: ನಾನು ಈ ರಾಜ್ಯದ ಮುಖ್ಯಮಂತ್ರಿಯಾದ್ರೇ, ನಿಮ್ಮ ಸರ್ಕಾರವೇ ಬರೋದಿಲ್ಲ. 20 ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಬಿಸಿ ಬಿಸಿ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದಂತ ಸದಸ್ಯ ಯತ್ನಾಳ್, ನಿಮ್ಮನ್ನು ನೋಡ್ತಾ ಇದ್ದೇನೆ. ಕಳೆದ ಒಂದು ಗಂಟೆಯಿಂದ ವಿಪಕ್ಷದವರೇ ಮಾತನಾಡುತ್ತಿದ್ದೀರಿ. ಅರ್ಧ ಗಂಟೆಯಲ್ಲಿ ನಿಮ್ಮ ಭಾಷಣ ಮೊಟಕುಗೊಳಿಸುವಂತೆ ಸ್ಪೀಕರ್ ಹೇಳಿದಂತೆ ಹೇಳಿದ್ರು.

ಮುಂದುವರೆದು ಮಾತನಾಡಿದಂತ ಅವರು, ಸಿದ್ದರಾಮಯ್ಯ ಬೆಂಬಲಿಗರಷ್ಟೇ ಸದನದಲ್ಲಿ ಕಾಣ್ತಾ ಇದ್ದಾರೆ. ಬೇರೆಯವರು ಕಾಣುತ್ತಿಲ್ಲವಲ್ಲ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಬಣದ ಕಾಲೆಳೆಜರು. ಈ ವೇಳೆ ಮಧ್ಯಪ್ರವೇಶಿಸಿದಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ನೀವು ಸಚಿವರೂ ಆಗಲಿಲ್ಲ, ಸಿಎಂ ಕೂಡ ಆಗಿಲ್ಲ. ನಿಮಗ್ಯಾಕೆ ಉಸಾಬರಿ ಎಂದು ಪ್ರಂಶಿಸಿದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *