ಬೀದರ್ ಜಿಲ್ಲೆ ಹುಲಸೂರ ತಾಲೂಕಿನ ಬೇಲೂರ ಗ್ರಾಮದಲ್ಲಿ ಘಟನೆ ನಡೆದಿದ್ದು. ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ 52 ವರ್ಷದ ಶಿವಕುಮಾರ್ ಕುಡಿತದ ಚಟವನ್ನ ಮೈಗಂಟಿಸಿಕೊಂಡಿದ್ದನು, ಇದೇ ಕುಡಿತದ ಚಟ ಇಂದು ಆತನನ್ನ ಚಟ್ಟ ಏರುವಂತೆ ಮಾಡಿದ್ದು, ನಿತ್ಯ ಕುಡಿದು ಗಲಾಟೆ ಮಾಡುತ್ತಾನೆ, ಊರಿನಲ್ಲಿ ಕುಟುಂಬದ ಮರ್ಯಾದೆ ಕಳೆಯುತ್ತಿದ್ದಾನೆ ಅಂತಾ ಸ್ವಂತ ಮಗನೆ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿಕೊಲೆ ಮಾಡಿದ ಆರೋಪಿ ರೇವಣ್ಣಪ್ಪಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮೃತನ ಮಗಳ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಪುತ್ರ ರೇವಣಪ್ಪಾನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ರೇವಣಪ್ಪಾ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
