ಧಾರವಾಡ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಟ್ಟು ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ 148 ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದು ಈ ಕೊಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಹಲವಾರು ದಿನಗೂಲಿ ನೌಕರರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಕಾರರನ್ನುದ್ದೇಸಿಸಿ ಸಾಮಾಜಿಕ ಕಾರ್ಯಕರ್ತ ಸುರೇಶ, ಕೆ. ಮಾತನಾಡಿ,
20 ಅಡುಗೆ ತಯಾರಕರರು, 128 ಅಡುಗೆ ಸಹಾಯಕರಿಗೆ ಕಳೆದ ಡಿಸೆಂಬರ್ ತಿಂಗಳಿಂದ ಸಂಬಳ ಮಾಡದಿರುವುದರಿಂದ ಅವರ ಜೀವನ ಸಾಗಿಸುವುದು ಹಾಗೂ ಕುಟುಂಬದ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಆರೋಪಿಸಿದರು.
ಸಂಬಳ ಮಾಡದಿರುವ ಏಜೆನ್ಸಿಗೆ ಅಧಿಕಾರಿಗಳು ನೋಟೀಸ್ ನೀಡಿದರೂ ಕೂಡ ಗಂಭೀರವಾಗಿ ಪರಿಗಣಿಸದ ಭಾರತ ಸಕ್ಯೂರಿಟ್ ಎಕ್ಸ್ ಸರ್ವಿಸ್ ಮೆನ್ ಏಜೆನ್ಸಿ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ, ದಿನಗೂಲಿ ನೌಕರರ ಸಂಬಳ ಶೀಘ್ರವಾಗಿ ನೀಡಬೇಕು. ಜೊತೆಗೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಪಿ. ಮಣಿವಣ್ಣನ್ ಅವರು ಹುಬ್ಬಳ್ಳಿಯಲ್ಲಿದ್ದಾಗ ಗಮನಕ್ಕೆ ತರಲಾಗಿದೆ. ಆದರೂ ಈವರೆಗೆ ಸಂಬಳ ದೊರೆತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸದ ಪರಿಣಾಮ ಇಂದು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈಗಲಾದರೂ ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸಂಬಳ ಬಿಡುಗಡೆ ಮಾಡಿ ದಿನಗೂಲಿ ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸುರೇಶ್ ಕೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಬಸವರಾಜ ಕೊದ್ದಡ್ಡಿ, ವಿಜಯ ಜಾಧವ್, ಅನಿಲ ಪವಾರ್, ಶಿವರಾಜ ಮೋತಿ, ವೇಣು ಜಿರಾಕ್ಸ್ ಧಾರವಾಡ, ರಮೇಶ ದಡೆಸೂರ ಸೇರಿದಂತೆ ಹಲವಾರು ದಿನಗೂಲಿ ನೌಕರರ ಮುಖಂಡರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

