ಹಾಸನ: ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಇದೆ. ಅದರ ಜೊತೆಗೆ ಕರ್ನಾಟಕದ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದೆ. ಚುನಾವಣೆ ನಡೆದರೆ ಮನೆಯಲ್ಲಿ ಮಲಗಿಕೊಳ್ಳೋದಕ್ಕೆ ಆಗಲ್ಲ. ಸೋಲೋ, ಗೆಲುವೋ ನಾವೂ ಕೂಡ ಹೋರಾಟ ಮಾಡುತ್ತೇವೆ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ಹೊಳೆನರಸೀಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ.
ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಬಿಜೆಪಿ ಬಲ ಹೆಚ್ಚಬಹುದು ಅಥವಾ ಕುಗ್ಗಬಹುದು. ರಾಜ್ಯಗಳ ಚುನಾವಣೆಗೂ, ಸಂಸತ್ ಚುನಾವಣೆಗೂ ವ್ಯತ್ಯಾಸವಿದೆ ಎಂಬುದು ನನ್ನ ಅನುಭವದ ಮಾತು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

