Breaking News

3000 ಪರವಾನಗಿ ಭೂಮಪಾಕರನ್ನು ನೇಮಕ : ಆರ್. ಅಶೋಕ್


ಬೆಂಗಳೂರು : 3000 ಪರವಾನಗಿ ಭೂಮಪಾಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್. ಅಶೋಕ್. ಪರವಾನಿಗೆ ಭೂಮಾಪಕರಿಗೆ ಕಂದಾಯ ಆಸ್ತಿ ಸರ್ವೆ ಅಧಿಕಾರ ನೀಡಲಾಗುವುದು. ಶೀಘ್ರದಲ್ಲೇ ಕಾನೂನು ತಿದ್ದುಪಡಿ ತರಲಾಗುವುದು. ರಾಜ್ಯದಲ್ಲಿ 4020 ಭೂಮಾಪಕರ ಮಂಜೂರಾದ ಹುದ್ದೆಗಳು ಇದ್ದು, 3379 ಭರ್ತಿಯಾಗಿವೆ. ಭೂಮಾಪಕರ ಕೊರತೆಯಿಂದಾಗಿ 2 ಲಕ್ಷ ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಇವುಗಳನ್ನು ವಿಲೇವಾರಿ ಮಾಡಲು ಶೀಘ್ರವೇ 3000 ಪರವಾನಿಗೆ ಭೂಮಾಪಕರ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Share News

About admin

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *