ಹುಬ್ಬಳ್ಳಿ: ಇವರೆಲ್ಲ 40 ವರ್ಷಗಳಿಂದ ಇದೆ ಸ್ಥಳದಲ್ಲಿ ತರಕಾರಿ ಮಾರುತ್ತ ತಮ್ಮ ಜೀವನನ್ನು ನಡೆಸುತ್ತಿದ್ದರು. ಆದ್ರೆ ಮಹಾನಗರ ಪಾಲಿಕೆ ಈಗ ಇವರ ಹೊಟ್ಟೆಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ…
ವಾರ್ಡ್ ನಂಬರ 27 ನವನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಮಹಾನಗಪಾಲಿಕೆ ಈ ತರಕಾರಿ ಮಾರುಕಟ್ಟೆಯನ್ನು ಕಿತ್ತು ಹಾಕುತ್ತಿರುವುದರಿಂದ ನವನಗರದ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಪಾಲಿಕೆ ವಿರುದ್ಧ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರ ಹಾಕಿ ತರಕಾರಿ ಮಾರುಕಟ್ಟೆಯನ್ನು ಕಿತ್ತು ಹಾಕದಂತೆ ವಲಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು…

ರೋಹಿನಿ, ವ್ಯಾಪಾರಸ್ಥರು
ಈ ಮಾರುಕಟ್ಟೆಗೆ ನವನಗರದ ಸುತ್ತುಮುತ್ತಲಿನ ಗಾಮನಗಟ್ಟಿ, ಅಮರಗೋಳ, ಬೈರಿದೇವರಕೋಪ್ಪ, ಸುತ್ತಗಟ್ಟಿ, ರಾಯಾಪೂರ ಹಿಗೆ ಇನ್ನು ಕೆಲವು ಉರುಗಳಿಂದ ರೈತರು ತರಕಾರಿ ತಂದು ಮಾರುತ್ತಾರೆ. ಈಗ ದಿಢೀರನೆ ಈ ಜಾಗವನ್ನು ಖಾಲಿ ಮಾಡುವಂತೆ ಪಾಲಿಕೆಯವರು ಹೇಳುತ್ತಿದ್ದರಿಂದ ರೈತರು ವ್ಯಾಪಾರಸ್ಥರು ಶಾಕ್ ಆಗಿದ್ದಾರೆ. ಪಾಲಿಕೆ ಮಾರ್ಚ್ 31 ರವರೆಗೆ ಈ ಜಾಗ ಖಾಲಿ ಮಾಡಲು ವ್ಯಾಪರಸ್ತರಿಗಡ ಗಡವು ಕೊಟ್ಟಿದೆ. ಈ ಜಾಗವನ್ನು ಕಬಳಿಸಲು ಕಾಣದ ಕೈಗಲಕು ಆಟವಾಡುತ್ತಿವೆ ಇದರ ಬಗ್ಗೆ ತನಿಕೆ ಆಗಬೇಕೆಂದು ಉತ್ತರ ಜನಶಕ್ತಿ ಸೇನಾ ಮುಖ್ಯಸ್ಥ ಎಸ್.ಎಸ್ ಶಂಕರಣ್ಣ ಅವರು ಪಾಲಿಕೆ ವಿರುದ್ಧ ಆಗ್ರಹಿಸಿದರು.

ಎಸ್ ಶಂಕರಣ್ಣ, UJS, ಸಂಸ್ಥಾಪಕರು
.
ಒಟ್ಟಿನಲ್ಲಿ ಇಷ್ಟು ವರ್ಷಗಳಿಂದ ಇದೇ ಜಾಗದಲ್ಲಿ ವ್ಯಾಪಾರ ಮಾಡುತ್ತ ಬಂದಿರುವ ನಮಗೆ ದಿಢೀರ್ ನೆ ಖಾಲಿ ಮಾಡಿ ಎಂದರೆ ಹೇಗೆ?
ಈ ಜಾಗವನ್ನು ನಾವು ಪ್ರಾಣ ಹೊದರು ಬಿಡುವುದಿಲ್ಲ ಈ ಕುರಿತು ನಾವು ಉಗ್ರವಾದ ಪ್ರತಿಭಟನೆ ಮಾಡುತ್ತೆವೆ ಎಂದು ಅಲ್ಲಿನ ವ್ಯಾಪಾರಸ್ಥರು ಹೇಳುತ್ತಿದ್ದಾರೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

