ಹುಬ್ಬಳ್ಳಿ : ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಯಾವುದೇ ದಾಖಲೆ ವಿಲ್ಲದೇ 100 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಬೈಕ್ ಹಾಗೂ ಮೊಬೈಲ್’ಗಳನ್ನು ವಶ ಪಡೆದುಕೊಂಡಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಎಐಎಂಐಎಂ ಸಂಘಟನಾಕಾರರು ರಾತ್ರಿ 2.30ರ ವೇಳೆ ಕಸಬಾ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಹಗಲಿನ ವೇಳೆ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ರಾತ್ರಿ ಸಮಯ ಅವರೆಲ್ಲ ಒಂದೆಡೆ ಸೇರುತ್ತಾರೆ. ಕೆಲವು ವೇಳೆ ಅವರು ಮನೆಗೆ ಬರಲು ತಡ ರಾತ್ರಿಯಾಗುತ್ತದೆ. ಆದರೆ, ಪೊಲೀಸರು ಅವರನ್ನೇ ಅನುಮಾನಾಸ್ಪದ ವ್ಯಕ್ತಿಗಳೆಂದು, ಆರೋಪಿಗಳೆಂದು ಭಾವಿಸಿ ಠಾಣೆಗೆ ಕರೆತರುವುದು ಅನ್ಯಾಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಕಸಬಾ ಠಾಣೆ ಇನ್‌ಸ್ಪೆಕ್ಟರ್ ಅಡಿವೆಪ್ಪ ಬನ್ನಿ, ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸುವುದು ಹಾಗೂ ಸಾರ್ವಜನಿಕರ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆ ಅನಗತ್ಯವಾಗಿ ರಸ್ತೆಬದಿಯಲ್ಲಿ ಇರುವವರನ್ನು ಹಾಗೂ ಓಡಾಡುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಸೋಮವಾರ ರಾತ್ರಿ ಸಹ ಒಂದಷ್ಟು ಮಂದಿಯನ್ನು ವಶಕ್ಕೆ ಪಡೆದು, ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದೇವೆ’ ಎಂದರು.
ಪ್ರತಿಭಟನೆಯಲ್ಲಿ ಎಐಎಂಐಎಂ ಮುಖಂಡ, ಪಾಲಿಕೆ ಸದಸ್ಯ ನಜೀರ್ ಹೂನ್ಯಾಳ, ದಾದಾಪೀರ್ ಬೆಟಗೇರಿ, ಇರ್ಫಾನ್ ನಾಲತ್ವಾಡ, ಅಝರ್ ಬಳ್ಳಾರಿ, ಖಾಜಾಸಾಬ್ ಮುಲ್ಲಾ ಹಾಗೂ ಸ್ಥಳೀಯರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

