ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ಷೇಪ – ಹುಬ್ಬಳ್ಳಿಯ ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ತ್ವರಿತ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ..? ಹುಬ್ಬಳ್ಳಿ: ಚನ್ನಗಿರಿ ಪ್ರಕರಣದಲ್ಲಿ ಡಿವೈಎಸ್ಪಿ, ಸಿಪಿಐ ಅಮಾನತ್ತು ಮಾಡಿ ಪೊಲೀಸರ ನೈತಿಕ ಬಲ ಕುಗ್ಗಿಸಿದ್ದಾರೆ ಸಿಎಂ ಸಿದ್ದರಾಮಯ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಸಿಎಂ ಈ ಧೋರಣೆ ನೋಡಿದರೆ ಪೊಲೀಸರು ಠಾಣೆ ಬಿಟ್ಟು ಓಡಿ ಹೋಗಬೇಕು ಎಂಬಂತಿದೆ ಎಂದು ಖಂಡಿಸಿದರು.ಮುಸ್ಲಿಂರಷ್ಟೇ ಅಲ್ಲ, ಯಾರೇ ಆದರೂ ಸರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ, ವಾಹನ ಜಖಂಗೊಳಿಸಿ ಗಲಭೆ ಎಬ್ಬಿಸುವುದು ಖಂಡನೀಯ. ಆದರೆ, ಈ ಪ್ರಕರಣದಲ್ಲಿ ಸಿಎಂ ಪೊಲೀಸರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಜೋಶಿ ಆಕ್ಷೇಪಿಸಿದರು.ಅಪರಾಧ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಆ ವೇಳೆ ಆತನಿಗೆ ಆರೋಗ್ಯ ಸಮಸ್ಯೆಯಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಿಎಂ ಆದೇಶದಂತೆ DYSP ಮತ್ತು CPI ಅಮಾನತ್ತು ಪಡಿಸುವುದು ಯಾವ ನ್ಯಾಯ..? ಎಂದು ಪ್ರಶ್ನಿಸಿದರು. ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಇಲ್ಲದ ತ್ವರಿತ ಕ್ರಮ ಚನ್ನಗಿರಿಯಲ್ಲೇಕೆ..?: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ, ಅಂಜಲಿ ಕೊಲೆ ಪ್ರಕರಣದಲ್ಲಿ ಕೈಗೊಳ್ಳದ ತ್ವರಿತ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಚನ್ನಗಿರಿ ಪ್ರಕರಣದಲ್ಲಿ ಏಕೆ ? ಕೈಗೊಂಡರು ಎಂದು ಜೋಶಿ ಪ್ರಶ್ನಿಸಿದರು. ತುಷ್ಟೀಕರಣದ ರಾಜಕಾರಣರಿಂದ ಅರಾಜಕತೆ : ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅರಾಜಕತೆ ನಿರ್ಮಾಣವಾಗುತ್ತಿದೆ ಎಚ್ಚರವಿರಲಿ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.ರಾಮೇಶ್ವರ ಕೆಫೆ ಪ್ರಕರಣದಲ್ಲಿ ಇದನ್ನೇ ಮಾಡಿದರು. ನೇಹಾ, ಅಂಜಲಿ ಹತ್ಯೆ ಹೀಗೆ ಯಾವುದೇ ಘಟನೆಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಲಿಲ್ಲ. ತನಿಖೆ ಆಗಬೇಕು ಎಂದರು. ಆದರೆ, ಚನ್ನಗಿರಿ ಪ್ರಕರಣದಲ್ಲಿ ಮಾತ್ರ ತನಿಖೆ ಆಗಬೇಕು ಅನಿಸಲಿಲ್ಲವೇ..? ತಕ್ಷಣ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ. ಇದು ಪೊಲೀಸರ ಬಲವನ್ನು ಕುಗ್ಗಿಸುವಂತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆಕ್ಷೇಪಿಸಿದರು.
Check Also
ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ
ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …
bigtvnews | Hubli Dharwad News | Kannada News | Karnataka News Hubli News | News In Hubli | Local news

