Breaking News

ಹಿಜಾಬ್ ಧರಿಸಲು ಅವಕಾಶ : 7 ಜನ ಅಮಾನತು


ಗದಗ : ನಗರದ ಎಸ್ ಎಸ್ ಎಲ್ ಸಿ ಮೊದಲ ಪರೀಕ್ಷಾ ದಿನದಂದು ಸಿಎಸ್ ಪಾಟೀಲ ಪ್ರೌಢ ಶಾಲೆಯ ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ ಶಿಕ್ಷಕರು , ಐವರು ಮೇಲ್ವಿಚಾರಕರು ಮತ್ತು ಇಬ್ಬರು ಅಧೀಕ್ಷಕರು ಸೇರಿದಂತೆ ಏಳು ಜನರನ್ನು ಅಮಾನತು ಮಾಡಲಾಗಿದೆ .

ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಕ್ಕೆ ಶಿಸ್ತು ಕ್ರಮ ಜರುಗಿಸಲಾಗಿದೆ . ಮಾರ್ಚ್ 28 ರಂದು ನಡೆದಿದ್ದ ಪ್ರಥಮ ಭಾಷೆ ಪರೀಕ್ಷೆ ವೇಳೆ ಹಿಜಾಬ್ ಗೆ ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನೆಲೆ ಕ್ರಮಕೈಗೊಳ್ಳಲಾಗಿದೆ . ಪರೀಕ್ಷಾ ಕೇಂದ್ರದ ಅಧೀಕ್ಷಕರು ಕೆಬಿ ಭಜಂತ್ರಿ , ಬಿಎಸ್ ಹೊನ್ನಗುಡಿ , ಕೊಠಡಿ ಮೇಲ್ವಿಚಾರಕರಾದ ಎಸ್ ಜಿ ಗೋಡಕೆ , ಎಸ್ ಎಸ್ ಗುಜಮಾಗಡಿ , ವಿಎನ್ ಕಿವುಡರ್ , ಎಸ್ ಯು ಹೊಕ್ಕಳದ , ಎಸ್ ಎಮ್ ಪತ್ತಾರ ಸೇರಿದಂತೆ ಏಳು ಜನರನ್ನು ತಕ್ಷಣಕ್ಕೆ ಜಾರಿಯಾಗುವಂತೆ ಅಮಾನತು ಮಾಡಿ ಗದಗ ಡಿಡಿಪಿಐ ಜಿ ಎಮ್ ಬಸವಲಿಂಗಪ್ಪ ಆದೇಶಿಸಿದ್ದಾರೆ .

Share News

About admin

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *