ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯ ಹೇಮಾವತಿ ಬಡಾವಣೆ 16ನೇ ವಾರ್ಡಿನಲ್ಲಿ ಬಾಕ್ಸ್ ಡ್ರೈನ್ ಚರಂಡಿ ಕಾಮಗಾರಿಗೆ ವಾರ್ಡಿನ ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್ ಚಾಲನೆ ನೀಡಿದರು.ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿಯು ಹಳೆಯ ಕಾಮಗಾರಿಯಾಗಿದ್ದು, ಹಂತಹಂತವಾಗಿ ವಾರ್ಡಿನ ಎಲ್ಲಾ ರಸ್ತೆಗಳು ಮತ್ತು ಚರಂಡಿಗಳನ್ನು ಮಾಡಿಸಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರೇಮಕುಮಾರ್ ವಿವರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಧರಸಿರಿವಂತ್, ಜಾಗಿನಕೆರೆ ನಾರಾಯಣಗೌಡ, ಮಂಜುನಾಥ, ಬೋರೇಗೌಡ, ಪ್ರಥಮದರ್ಜೆ ಗುತ್ತಿಗೆದಾರ ವಿ.ಡಿ.ಮೋಹನ್, ಚೌಡೇನಹಳ್ಳಿ ನಾಗರಾಜು, ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





