ಹುಬ್ಬಳ್ಳಿ: ಹುಬ್ಬಳ್ಳಿ-ಗದಗ ನಡುವೆ ಪ್ರಯಾಣಿಸುವ ಬಸ್‌ಗಳ ದರವನ್ನು ಸಾರಿಗೆ ಸಂಸ್ಥೆ ದಿಢೀರ್ ಆಗಿ 15 ರೂ. ಹೆಚ್ಚಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯಿಂದ ಗದಗ ನಡುವೆ 60 ಕಿಲೋ ಮೀಟರ್ ಪ್ರಯಾಣಕ್ಕೆ ನಿನ್ನೆಯವರೆಗೂ 60 ರೂ.ಗಳ ದರವನ್ನು ನಿಗದಿ ಮಾಡಲಾಗಿತ್ತು. ಶನಿವಾರದಿಂದ 15 ರೂ. ಹೆಚ್ಚಿಸಲಾಗಿದ್ದು, 75 ರೂ.ಗಳಿಗೆ ಏರಿಕೆಯಾಗಿದೆ. ಹೀಗಾಗಿ ನಿತ್ಯ ಹುಬ್ಬಳ್ಳಿಗೆ ಕೆಲಸ ಕಾರ್ಯಗಳಿಗೆ ಬರುವ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಗೆ ನಿತ್ಯ ಗದಗ ಭಾಗದಿಂದ ರೈತರು, ವ್ಯಾಪಾರಸ್ಥರು, ವಿವಿಧ ಖಾಸಗಿ ನೌಕರರು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಆಗಮಿಸುತ್ತಾರೆ. ಈ ರೀತಿಯಾಗಿ ಏಕಾಏಕಿ ದರ ಏರಿಕೆ ಮಾಡಿರುವುದರಿಂದ ಆರ್ಥಿಕವಾಗಿ ಹೊಡೆತ ಬೀಳಲಿದೆ. ಅಲ್ಲದೆ ಸರಕಾರ ಟೋಲ್ ಶುಲ್ಕ ಪಾವತಿಸಲು ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ನಲವಡಿ ಬಳಿ ಟೋಲ್:ಹುಬ್ಬಳ್ಳಿ-ಗದಗ ಮಧ್ಯೆ ನೂತನವಾಗಿ ನಲವಡಿ ಬಳಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಈ ಮೂಲಕ ಸಂಚಾರ ಮಾಡುವ ವಾಹನಗಳಿಗೆ ಟೋಲ್ ವಸೂಲಿ ಮಾಡುತ್ತಿರುವುದು. ದರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ. ಆದರೆ ಟೋಲ್ ಹಣಕ್ಕಾಗಿ ಪ್ರತಿ ಪ್ರಯಾಣಿಕನಿಂದ 15 ರೂ. ಹೆಚ್ಚುವರಿ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಖಂಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

