Breaking News

ಧಾರವಾಡಲ್ಲಿ ಐಪಿಎಲ್ ಬೆಟಿಂಗ್ ಹಾವಳಿ : 3 ಆರೋಪಿಗಳು ಬಂಧನ


ಧಾರವಾಡ : ನಗರದ ಕೆಲಗೇರಿ ಬಳಿಯ ಆಂಜನೇಯ ನಗರದಲ್ಲಿ ಮೊಬೈಲ್‌ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳನ್ನ ಸಿಸಿಬಿ ಇನ್ಸಪೆಕ್ಟರ್ ಎಚ್.ಎಂ. ಪಾಟೀಲ ಮತ್ತು ಸಿಬ್ಬಂದಿ ದಾಳಿ ನಡೆಸಿ ಬಂಧಿಸಿದ್ದಾರೆ .

ಆಂಜನೇಯ ನಗರದ ಬಸವರಾಜ ಧರಿಯಪ್ಪ ಬಳ್ಳೋಳ್ಳಿ ಮತ್ತು ಕಾರ್ತಿಕ ಪರಶುರಾಮ ಗೊಡ್ಡೆಮ್ಮಿ ಎಂಬುವವರು ಬೆಂಟಿಗ್ ಆಡುತ್ತೀದ್ದ ಆರೋಪಿಗಳು ಆಗದ್ದಾರೆ.

ದಾಳಿ ಸಂದರ್ಭದಲ್ಲಿ ಬಸವರಾಜ ವಾಲೀಕಾರ ಮತ್ತು ರವಿ ವಾಲೀಕಾರ ಎಂಬುವರು ಪರಾರಿಯಾಗಿದ್ದಾರೆ. ಬಂಧಿತರಿಂದ 2020 ರೂಪಾಯಿ ನಗದು ಮತ್ತು 2 ಮೊಬೈಲ್ ಇನ್ನಿತರ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ . 2 ಕಳೆದ ಶನಿವಾರ ರಾತ್ರಿ ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಆಟ ನಡೆಯುತ್ತಿದ್ದಾಗ ಶಹರ ಠಾಣಾ ವ್ಯಾಪ್ತಿಯ ಚರಂತಿಮಠ ಗಾರ್ಡನ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ಬೆಟ್ಟಿಂಗ್ ನಡೆಸಲಾಗುತ್ತಿತ್ತು .

ಈ ಸಂದರ್ಭದಲ್ಲಿ ಸಿಸಿಬಿ ಇನ್ಸಪೆಕ್ಟರ್ ವಿ.ಎಸ್.ಚೌಗುಲೆ ಹಾಗೂ ಸಿಬ್ಬಂದಿ ದಾಳಿ ನಡೆಸಿ , ಸೊಲ್ಲಾಪುರ ಮೂಲದ ತಸ್ಲಿಂ ಅರೀಫ್ ಮಹ್ಮದಇಸಾಕ ನಾಯಕ ಎಂಬಾತನನ್ನು ಬಂಧಿಸಿದ್ದಾರೆ . ಆರೋಪಿತನಿಂದ 12 ಸಾವಿರ ರೂಪಾಯಿ ನಗದು ಮತ್ತಿತರರ ಸಾಮಗ್ರಿಗಳನ್ನು ವಶಪಡಿಸಿ ಕೊಳ್ಳಲಾಗಿದೆ .

Share News

About admin

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *