Breaking News

ಜೀವದ ಹಂಗು ತೊರೆದ ಮಗುವಿನ ಪ್ರಾಣ ಕಾಪಾಡಿದ ಪೋಲಿಸ್ : ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತ

ಕಳೆದ ಶನಿವಾರ ರಾಜಸ್ಥಾನದ ಕರೌಲಿಯಲ್ಲಿ ಹಿಂದೂ ಹೊಸ ವರ್ಷಾಚರಣೆಯ ಬೈಕ್ ರ್ಯಾಲಿ ವೇಳೆ ಕಲ್ಲು ತೂರಾಟ ನಡೆದು ಕೋಮು ಗಲಭೆಯಾಗಿತ್ತು.
ಆ ಜಾಗದಿಂದ ಪುಟ್ಟ ಮಗುವನ್ನು ಜೀವದ ಹಂಗು ತೊರೆದು ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿರುವ ಫೋಟೋ ಒಂದು ಭಾರೀ ವೈರಲ್ ಆಗಿದೆ .

ಪೊಲೀಸ್ ಸಿಬ್ಬಂದಿಯ ಮಾನವೀಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಈ ವೇಳೆ ಕೆಲವು ಕಿಡಿಗೇಡಿಗಳು ಅಂಗಡಿ- ಮುಂಗಟ್ಟು , ಮನೆಗಳಿಗೆ ಬೆಂಕಿ ಹಚ್ಚಿದ್ದರು . ಬೆಂಕಿ ಹೊತ್ತಿ ಉರಿಯುತ್ತಿದ್ದ ಸಂದರ್ಭ ಜನರು ದಿಕ್ಕಾಪಾಲಾಗಿ ಓಡಿದ್ದರು .

ಆದರೆ , ಇಬ್ಬರು ಮಹಿಳೆಯರು ಮತ್ತು ಒಂದು ಪುಟ್ಟ ಕಂದಮ್ಮಮನೆಯೊಂದರಲ್ಲಿ ಅಪಾಯಕ್ಕೆ ಸಿಲುಕಿದ್ದರು.ಆಗ ರಾಜಸ್ಥಾನದ ಪೊಲೀಸ್ ಪೇದೆ ನೇತ್ರೇಶ್ ಶರ್ಮಾ ಅವರು , ಬೆಂಕಿಯ ನಡುವೆ ಜೀವದ ಹಂಗು ತೊರೆದು ಮಗುವನ್ನು ಕಾಪಾಡಿದ್ದಾರೆ . ನೇತ್ರೇಶ್ ಶರ್ಮಾ ಬಟ್ಟೆಯಲ್ಲಿ ಸುತ್ತಿ ಮಗುವನ್ನು ಹಿಡಿದುಕೊಂಡು ಓಡಿ ಬರು ಫೋಟೋ ಮಾಧ್ಯಮದವರ ಕ್ಯಾಮರಾದಲ್ಲಿ ಸೆರೆಯಾಗಿದೆ . ಈ ಫೋಟೋ ಇಂಟರ್ ನೆಟ್ ನಲ್ಲಿ ಹರಿದಾಡಿದ್ದು , ಕೋಮು ಸಂಘರ್ಷದ ನಡುವೆ ಮಾನವೀಯತೆಯನ್ನು ಎತ್ತಿ ಹಿಡಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಜನರು ಶಬ್ಬಾಸ್ ಎಂದಿದ್ದಾರೆ .

Share News

About admin

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *