ಧಾರವಾಡ :ಮಸೀದಿ ಮೇಲೆ ಹಾಕಲಾಗಿರುವ ಮೈಕ್ ನಿಷೇಧಿಸಬೇಕು ಇಲ್ಲವೇ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಕಳೆದ 6 ತಿಂಗಳ ಹಿಂದೆ ಶ್ರೀರಾಮ ಸೇನೆ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು . ಆದರೆ , ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದರು.
ನಗರದಲ್ಲಿ ಮಾತನಾಡಿರುವ ಅವರು , ಮಸೀದಿಗಳಿಂದ ಬರುತ್ತಿರುವ ಶಬ್ದವನ್ನು ತಡೆಗಟ್ಟುವ ಸಂಬಂಧ ಶಬ್ದ ಮಾಲಿನ್ಯ ತಡೆಗಟ್ಟುವ ಇಲಾಖೆಗೆ ಮನವಿ ಕೊಟ್ಟಿದ್ದೇವೆ . ಅವರೂ ಕ್ಯಾರೆ ಎಂದಿಲ್ಲ . ಈ ಸಂಬಂಧ ಮತ್ತೆ ನಾವು ಡಿಸಿ ಅವರಿಗೂ ಮನವಿ ಕೊಡಲಿದ್ದೇವೆ . ಈ ಮೂಲಕ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಡಲಿದ್ದೇವೆ ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

