ಕಾಸರಗೋಡು : ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ಕಾಞ೦ಗಾಡ್ನ ಮಣಿಯಾಟ್ ನಲ್ಲಿ ನಡೆದಿದೆ.
ಕಾಞ೦ಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ . ವಿ ಬಾಲಕೃಷ್ಣನ್ ( ೬೪) ಮೃತಪಟ್ಟವರು.ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಡಿದು ಬಿದ್ದಿದ್ದ ತಂತಿ ತಗಲಿ ದುರ್ಘಟನೆ ನಡೆದಿದೆ. ಸಂಜೆ ಭಾರೀ ಗಾಳಿಗೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು ಈ ರಸ್ತೆಯಾಗಿ ಬರುತ್ತಿದ್ದ ಬಾಲಕೃಷ್ಣ ಅವರ ಸ್ಕೂಟರ್ ತಂತಿ ತಗುಲಿ ಈ ದಾರುಣ ಘಟನೆ ನಡೆದಿದೆ. ಜೊತೆಗಿದ್ದ ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ , ಬಾಲಕೃಷ್ಣನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗಳ ಮನೆಗೆ ಬಂದು ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

