Breaking News

ನಿವೃತ್ತ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಮಾಡಿದ ಗೆಳೆಯರ ಬಳಗ

ಹುಬ್ಬಳ್ಳಿ: ಬಿಎಸ್ಎಫ್ ದಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿ ತಮ್ಮ ಊರಿಗೆ ಆಗಮಿಸಿದ ಯೋಧ ಸುರೇಶ ರಾಮು ದೇವೂರ ಅವರನ್ನು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರೇಲ್ವೆ ನಿಲ್ದಾಣದಲ್ಲಿ ಮಂಜುನಾಥ ಹೆಬಸೂರ ಗೆಳೆಯರ ಬಳಗ, ಯೋಧನಿಗೆ ಆರತಿ ಎತ್ತಿ, ಅವರಿಗೆ ಭಾರತ ಮಾತೆಯ ಭಾವ ಚಿತ್ರ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಿ ಆತ್ಮೀಯವಾಗಿ ಬರಮಾಡಿಕೊಂಡರು.

1999ರಲ್ಲಿ ಬಿಎಸ್ಎಫ್ ಗೆ ಸೇರ್ಪಡೆಗೊಂಡಿದ್ದ ಸುರೇಶ, ಜಮ್ಮು ಕಾಶ್ಮೀರ, ಪಂಜಾಬ, ಆಸಾಂ ಸೇರಿದಂತೆ ಹಲವು ಗಡಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೇಶಕ್ಕಾಗಿ ಕಾರ್ಯನಿರ್ವಹಿಸಿದ್ದು ಅತಿ ಸಂತೋಷ ತಂದಿದೆ ಹಾಗೆ ನಿವೃತ್ತಿ ಜೀವನದಲ್ಲೂ ಕೂಡ, ಬಿಎಸ್ಎಫ್ ಕುರಿತು ಯುವಕರಿಗೆ ಅರಿವು ಮೂಡಿಸುವ ಕಾರ್ಯ ಮಾಡುವುದಾಗಿ ಹೇಳಿದ್ದಾರೆ….

Share News

About admin

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *