Breaking News

ಹೆತ್ತ ಮಗುವನ್ನು ಮಾರಾಟ ಮಾಡಿದ ತಾಯಿ


ಮೈಸೂರು : ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ವಿಶ್ವನಾಥ ಕಾಲೋನಿಯ ನಿವಾಸಿ ಮಹಿಳೆಯೊಬ್ಬಳು ಬಡತನದ ಬೇಗೆಗೆ ಬೇಸತ್ತು ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾಳೆ. ಯಲ್ಲಮ್ಮ ಎಂಬುವವರು ಮಗುನನ್ನು ಮಾರಾಟ ಮಾಡಿದ ತಾಯಿ ಎಂದು ತಿಳಿದುಬಂದಿದೆ.

ಇವರು ಮಗುನನ್ನು ಆಸ್ಪತ್ರೆಯಲ್ಲಿ ಮಾರಾಟ ಮಾಡಿದರೆ ಗೊತ್ತಾಗುತ್ತೆದೆ ಎಂಬ ಕಾರಣಕ್ಕೆ ಮಹಿಳೆ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡಿದ್ದಾಳೆ. ಮಕ್ಕಳಿಲ್ಲದ ದಂಪತಿಗಳಿಗೆ ಮಗುವನ್ನು ಮಾರಾಟ ಮಾಡಿ ಮರಳಿ ಮನೆಗೆ ವಾಪಸ್ ಆಗಿದ್ದಾಳೆ.

ಮನೆಗೆ ವಾಪಸ್ ಆದ ಮಹಿಳೆಗೆ ಮಗುವಿನ ಬಗ್ಗೆ ಅಕ್ಕಪಕ್ಕದ ಮನೆಯವರು ವಿಚಾರಿಸಿದ್ದಾರೆ. ಇದಕ್ಕೆ ಉತ್ತರಿಸಲು ತಡಬಡಿಸಿದಾಗ, ಸ್ಥಳೀಯರು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ಪೊಲೀಸರು ಯಲ್ಲಮ್ಮ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *