ಧಾರವಾಡ: ಸುಮಾರು 15 ವರ್ಷಗಳಿಂದ ಧಾರವಾಡದ ನುಗ್ಗಿಕೆರಿ ಶ್ರೀ ಹನುಮಂತ ದೇವಸ್ಥಾನ ಸುತ್ತ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಅಂಗಡಿಗಳನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ದಬ್ಬಾಳಿಕೆ ಮಾಡಿ ಅಂಗಡಿಯಲ್ಲಿ ಇದ್ದ ಕಲ್ಲಂಗಡಿ ಹಣ್ಣುನ್ನು ನಡು ರಸ್ತೆಯಲ್ಲಿ ಒಡೆದು ಮುಸ್ಲಿಂ ಅಂಗಡಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯವನ್ನು ಮಾಡಿರುವುದು ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಅಶಾಕ್ ಕುಮಟಾಕರ್ ಹೇಳಿದರು .
ಅಲ್ಲದೇ ಕೂಡಲೇ ಸರ್ಕಾರ ಹಾಗೂ ಜಿಲ್ಲಾ ಆಡಳಿತ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕು ಒಂದು ವೇಳೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

