ಧಾರವಾಡ : ಸುರಿಯುವ ಮಳೆಯಲ್ಲೇ ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಆಂಜನೇಯನ ತೇರನ್ನೆಳೆದಿದ್ದಾರೆ . ಅನೇಕ ಕಡೆಗಳಲ್ಲಿ ವೀರಾಂಜನೇಯನ ರಥೋತ್ಸವ ನಡೆದಿದೆ .
ಅದೇ ರೀತಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲೂ ಆಂಜನೇಯನ ರಥೋತ್ಸವವಿತ್ತು . ಸಂಜೆ 7 ಗಂಟೆಯ ಸುಮಾರಿಗೆ ಭಕ್ತರೆಲ್ಲರೂ ಸೇರಿ ತೇರು ಎಳೆಯುವ ಸಂದರ್ಭದಲ್ಲೇ ಮಳೆ ಬರಲಾರಂಭಿಸಿತು.ಬಮಳೆಯನ್ನೂ ಲೆಕ್ಕಿಸದೇ ಭಕ್ತ ಸಮೂಹ ಆಂಜನೇಯನ ತೇರನ್ನು ಎಳೆದು ಪುನೀತರಾಗಿದ್ದಾರೆ.ಇನ್ನು ರಥೋತ್ಸವದಲ್ಲಿ ಕರಡಿ ಮೇಳ , ಜಗ್ಗಲಿಗೆ ಮೇಳ , ಪುರವಂತರ ಮೇಳದವರೂ ಪಾಲ್ಗೊಂಡು ರಥೋತ್ಸವದ ಮೆರಗು ಹೆಚ್ಚಿಸಿದರು . ಅಲ್ಲಿ ಸೇರಿದ್ದ ಭಕ್ತರು ತೇರಿಗೆ ಉತ್ತತ್ತಿ , ಬಾಳೆಹಣ್ಣುಗಳನ್ನು ತೂರಿ ಭಕ್ತಿಯ ನಮನ ಸಲ್ಲಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

