ಉದ್ಯಾನದಂಚಿನ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗಷ್ಟೆ ಆದಿವಾಸಿ ಯುವಕನನ್ನು ಬಲಿ ಪಡೆದಿದ್ದ ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಮಮೇಯಲು ಬಿಟ್ಟಿದ್ದ ತೆನೆ ಹಸುವನ್ನು ಬಲಿ ಪಡೆದಿದೆ.ಈ ಭಾಗದಲ್ಲಿ ಹುಲಿ ಸೆರೆಗೆ ಹಲವೆಡೆ ಬೋನ್‌ಗಳನ್ನು ಇಡಲಾಗಿದೆ. ಹುಲಿಯೂ ಮೇಯಲು ಹಸುವನ್ನು ಬಿಟ್ಟಿದ್ದಾಗ ಹಗಲು ವೇಳೆಯೇ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದ ರೈತ ಕಂಗಾಲಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

