ಹುಬ್ಬಳ್ಳಿ : ರೈತರ ಉಳಿವು, ಅಳಿವಿಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತ ಭಾರತ ಪಕ್ಷದಿಂದ ೨೨೪ ಮತಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಉತ್ತರ ಕರ್ನಾಟಕ ರೈತ ಸಂಘ ತಿರ್ಮಾಣಿಸಲಾಗಿದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೨೪ ಕ್ಷೇತ್ರದಲ್ಲಿಯೂ ರೈತರೇ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.
ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಹಾಗೂ ಬೆಂಬಲ ಬೆಲೆ ದೊರತಿಲ್ಲ. ಇದರಿಂದಾಗಿ ರೈತರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಪರವಾಗಿ ಸರಿಯಾದ ಆಡಳಿತ ನಡೆಸುವಲ್ಲಿ ಸರ್ಕಾರಗಳು ವಿಫಲಾವಾಗಿವೆ. ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆಯಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ನೀಡಿದ್ಧರೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರೈತರು ದೃಢ ನಿರ್ಧಾರ ಕೈಗೊಂಡು ರೈತರೇ ಎಂಎಲ್ಎ ಆಗಬೇಕಂದು ತೀರ್ಮಾನಿಸಿ ರೈತ ಭಾರತ ಪಕ್ಷವನ್ನು ಸ್ಥಾಪಿಸನೆ ಮಾಡಿರುವುದಾಗಿ ಹೇಳಿದರು.
ರೈತ ಭಾರತ ಪಕ್ಷಕ್ಕೆ ರೈತರು ಕೈ ಜೋಡಿಸಲು ಸಜ್ಜಾಗಿದ್ದು, ರೈತರ ಸಮಸ್ಯೆಗಳನ್ನು ರೈತರೇ ಕಂಡುಕೊಳ್ಳುವಂತಹ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಷ್ಟ್ರೀಯ ಅಧ್ಯಕ್ಷ ಮುತ್ತಪ್ಪ ಹಿರೇಕುಂಬಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಳಿಯಪ್ಪ ದಬಗಲ್, ಆನಂದ ಜಕಾತಿ, ನಾಗಭೂಷಣ ಹೂಲಿಕಟ್ಟಿ ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

