Breaking News

ಹುಬ್ಬಳ್ಳಿ ಗಲಭೆ 133 ಜನರ ಬಂಧನ: ಸ್ಟೇಷನ್ ಮುಂದೆ ಪಾಲಕರ ಹೈಡ್ರಾಮಾ

ಹುಬ್ಬಳ್ಳಿ: ಶನಿವಾರ ರಾತ್ರಿ ವೇಳೆಯಲ್ಲಿ ಶಾಂತಿಯಿಂದ ಕೂಡಿದ್ದ ಹುಬ್ಬಳ್ಳಿಯಲ್ಲಿ ಅಶಾಂತಿಯನ್ನು ಹುಟ್ಟು ಹಾಕಿ ಕಲ್ಲು ತೂರಾಟ ನಡೆಸಿರುವ ಗಲಭೆಕೋರರನ್ನು ಬಂಧಿಸುವ ಕಾರ್ಯಾಚರಣೆ ದಿನದಿಂದ ದಿನಕ್ಕೆ ಚುರುಕುಗೊಂಡಿದ್ದು, ಇಂದು ಕೂಡ ಏಳು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು. ವೈದ್ಯಕೀಯ ತಪಾಸಣೆ ಹಾಗೂ ಕಾರಾಗೃಹಕ್ಕೆ ಕರೆದೊಯ್ದರು.

ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ 133 ಜನರನ್ನು ವಶಕ್ಕೆ ಪಡೆದಿದ್ದು, ದಿನದಿಂದ ದಿನಕ್ಕೆ ಬಂಧಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಈಗಾಗಲೇ ಏಳು ಜನ ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಹಳೆ ಹುಬ್ಬಳ್ಳಿಯ ಠಾಣೆಯಿಂದ ವೈದ್ಯಕೀಯ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಕಳಿಸಲಾಯಿತು. ಅಲ್ಲದೇ ತಪಾಸಣೆ ಬಳಿಕ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ಇನ್ನೂ ಮಾಸ್ಟರ್ ಮೈಂಡ್ ಹಾಗೂ ರೌಡಿಶೀಟರ್ ಬಂಧಿಸಿದ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಮತ್ತಷ್ಟು ಆರೋಪಿಗಳನ್ನು ಹೆಡೆಮುರಿ ಕಟ್ಟಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇಂದು ಕೂಡ ಬಂಧಿತರನ್ನು ಕರೆದುಕೊಂಡು ಹೋಗುವ ವೇಳೆಯಲ್ಲಿ ಪಾಲಕರ ಹೈಡ್ರಾಮಾ ನಡೆದಿದ್ದು, ಸಂಬಂಧಿಕರನ್ನು ನೋಡಿದ ಆರೋಪಿಗಳು, ಬಂಧಿತರನ್ನು ನೋಡಿದ ಸಂಬಂಧಿಕರು ಅಳುವ ಮೂಲಕ ಹೈ ಡ್ರಾಮಾ ಮಾಡಿದ್ದಾರೆ.

Share News

About Shaikh BigTv

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *