ಧಾರವಾಡ: ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡರ ಜನ್ಮ ದಿನಾಚರಣೆ ಅಂಗವಾಗಿ ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೆಟ್ ಲಿಮಿಟೆಡ್ ಕಂಪೆನಿರವರ ಸಹಯೋಗದಲ್ಲಿ ಧಾರವಾಡ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಹಾಂತಯ್ಯ ಹಿರೇಮಠರವರ ಹೊಲದಲ್ಲಿ ತಾಳೆ ಸಸಿ ನಾಟಿ ಮಾಡುವ ಮೂಲಕ ತಾಳೆ-ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಶಿವಲೀಲಾ ವಿನಯ ಕುಲಕರ್ಣಿ ರವರು ಆಗಮಿಸಿದ್ದರು. ಮರೇವಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಈರಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಮರೇವಾಡ, ತಿಮ್ಮಾಪೂರ ಹಾಗೂ ಅಮ್ಮಿನಬಾವಿ ಗ್ರಾಮಗಳ ರೈತರು ಮತ್ತು ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಅಮ್ಮಿನಬಾವಿ ರೈ.ಸಂ.ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಧಾರವಾಡ ಜಿಲ್ಲೆಯ ಏರಿಯಾ ಮ್ಯಾನೇಜರ್ ಮೃತ್ಯುಂಜಯ ಪಾಟೀಲ ಮತ್ತು ಕ್ಲಸ್ಟರ್ ಆಫೀಸರ್ ಸಿದ್ದಪ್ಪ ಕುಂದರಗಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





