ಹುಬ್ಬಳ್ಳಿ : ವೀರಶೈವ ಸಮಾಜ ಸಂಘಟನಾ ಸಮಿತಿ, ಬ್ರಾಹ್ಮಣ ಸೇವಾ ಸಂಘ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ನವನಗರ, ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ, ಶ್ರೀ ಆದಿ ಗುರು ಶಂಕರಾಚಾರ್ಯರ ಮತ್ತು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಭಾವಚಿತ್ರಗಳ ಭವ್ಯ ಮೆರವಣಿಗೆ ಮೇ. ೨ ರಂದು ಸಂಜೆ ೪ ಗಂಟೆಗೆ ಜರುಗಲಿದೆ ಎಂದು ಸಂಚಾಲಕ ನರೇಂದ್ರ ಕುಲಕರ್ಣಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಶೋಭಾಯಾತ್ರೆ ಚಾಲನೆಯನ್ನು ಶಾಸಕರಾದ ಅರವಿಂದ ಬೆಲ್ಲದ್ ನೆರವೇರಿಸಲಿದ್ದಾರೆ ಎಂದರು.
ನವನಗರದಿಂದ ಮುಖ್ಯದ್ವಾರ, ಮಾರುತಿ ಮಂದಿರದಿಂದ ಸಕಲ ವಾದ್ಯವೃಂದ ಮತ್ತು ಕಲಾಮೇಳದೊಂದಿಗೆ ಭವ್ಯ ಶೋಭಾಯಾತ್ರೆ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಕರ್ನಾಟಕ ವೃತ್ತ, ಎಂ.ಆಯ್.ಜಿ ೧೪ ನೇ ಕ್ರಾಸ ಮೂಲಕ ಶ್ರೀ ಈಶ್ವರ ಗುಡಿ ತಲುಪಲಿದೆ ಎಂದು ನುಡಿದರು.
ಮೂರು ಸಮಾಜದಿಂದ ಒಗ್ಗೂಡಿ ಈ ಮೂವರು ಮಹಾನ್ ವ್ಯಕ್ತಿಗಳ ಭವ್ಯ ಮೆರವಣಿಗೆ ಹಮ್ಮಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಬಿ.ವಿ.ಸೂಗಿ, ಕರ್ನಾಟಕ ಪರಿಷತ್ತ ಅಧ್ಯಕ್ಷ ಪಿ.ಪಿ.ಗಾಯಕವಾಡ, ಎಸ್.ಆರ್.ನೆಲುಗಲ್, ವಿನೋದ್ ಜಾಧವ್ ಸೇರಿದಂತೆ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

