Breaking News

ಪಿಎಸ್‌ಐ ನೇಮಕಾತಿ : ಮತ್ತೊಮ್ಮೆ ಪರೀಕ್ಷೆ ಅಕ್ರಮದಲ್ಲಿ ಭಾಗಿ


ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧಿಸಿ ಬಂಧಿತರಾಗಿರುವ ಆರ್‌.ಡಿ. ಪಾಟೀಲ್‌ ಹಾಗೂ ಮಂಜುನಾಥ್‌ ಮೇಳಕುಂದಿ ಅವರು ಈ ಹಿಂದೆ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ಹುದ್ದೆ ಪರೀಕ್ಷೆ ಅಕ್ರಮದಲ್ಲೂ ಆರೋಪಿಗಳಾಗಿದ್ದರು.

ಭೂಸನೂರು ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಮರ್ಜಾ ಯೋಜನೆ ಅಣೆಕಟ್ಟು ಉಪವಿಭಾಗ ಕೋರಳ್ಳಿ ಕ್ಯಾಂಪ್‌ ಸಹಾಯಕ ಎಂಜಿನಿಯರ್‌ ಆಗಿರುವ ಮಂಜುನಾಥ ಮೇಳಕುಂದಿ ಹಾಗೂ ಮತ್ತೋರ್ವ ಆರೋಪಿ ರುದ್ರಗೌಡ ಪಾಟೀಲ್‌ (ಆರ್‌.ಡಿ.ಪಾಟೀಲ್‌) ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಪರೀಕ್ಷೆ ಅಕ್ರಮದಲ್ಲೂ ಭಾಗಿಯಾದ ಆರೋಪ ಎದುರಿಸುತ್ತಿದ್ದು, ಮಂಜುನಾಥ್‌ 4ನೇ ಹಾಗೂ ಆರ್‌.ಡಿ.ಪಾಟೀಲ್‌ 6ನೇ ಆರೋಪಿಯಾಗಿದ್ದರು.

Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *