Breaking News

ಜುಲೈನಲ್ಲಿ ಧಾರವಾಡ – ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ : ಸಚಿವ ಜೋಶಿ

ಜುಲೈನಲ್ಲಿ ಧಾರವಾಡ – ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ : ಸಚಿವ ಜೋಶಿ

ಹೈಲೈಟ್ಸ್‌:ರಾಜಧಾನಿ ಮತ್ತು ಉತ್ತರಕರ್ನಾಟಕದ ಮಧ್ಯೆ ವಂದೇ ಭಾರತ್‌ ಸೆಮಿಸ್ಪೀಡ್‌ ರೈಲಿನಲ್ಲಿ ಓಡಾಡಬೇಕು ಎಂಬ ಜನರ ಕನಸು ಶೀಘ್ರದಲ್ಲಿಯೇ ನನಸು.
ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರ ಶೀಘ್ರದಲ್ಲೇ ಆರಂಭ.
ಬೆಂಗಳೂರು ಧಾರವಾಡ ವಂದೇ ಭಾರತ್‌ ರೈಲು ರಾಜ್ಯದಲ್ಲಿ ಓಡಾಟ ನಡೆಸುವ ಎರಡನೇ ರೈಲಾಗಲಿದೆ.

ಬಹುನಿರೀಕ್ಷತ ಧಾರವಾಡ ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್‌ ರೈಲು ಓಡಾಟಕ್ಕೆ ಕಾಲ ಕೂಡಿಬಂದಿದೆ

ನವದೆಹಲಿ : ಬಹು ನಿರೀಕ್ಷೆಯ ಧಾರವಾಡ – ಬೆಂಗಳೂರು ಮಧ್ಯದ ವಂದೇ ಭಾರತ್ ರೈಲಿನ ಸೇವೆ ಇನ್ನು ಕೆಲವೇ ದಿನಗಳಲ್ಲಿ ವಿದ್ಯುಕ್ತವಾಗಿ ಆರಂಭವಾಗಲಿದೆ. ಇಂದು ದೆಹಲಿಯಲ್ಲಿ ಕೇಂದ್ರ ರೈಲ್ವೇ ಮಂತ್ರಿ ಶ್ರೀ Ashwini Vaishnaw ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದು, ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ..

ಅವಳಿ ನಗರದ ಜನರ ಬಹು ನಿರೀಕ್ಷಿತ ಈ ಉತ್ಕಷ್ಟ ರೈಲಿನ ಪ್ರಯಾಣದ ಅನುಭವವನ್ನು ಶೀಘ್ರದಲ್ಲಿಯೇ ಆಸ್ವಾದಿಸಬಹುದಾಗಿದೆ ಎಂದೂ ಜೋಶಿ ಹೇಳಿದ್ದಾರೆ.

ಈ ರೈಲಿನ ವಿಶೇಷತೆ ಏನು?
ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಶಾರಾಮಿ ವ್ಯವಸ್ಥೆ, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದ್ದು, ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ಈ ರೈಲು ಹೊಂದಿದೆ. ವಂದೇ ಭಾರತ್‌ ರೈಲಿನಲ್ಲಿ ಆನ್‌ಬೋರ್ಡ್‌ ಉಪಾಹಾರದ ವ್ಯವಸ್ಥೆ ಇದೆ. ರೀಡಿಂಗ್‌ ಲೈಟ್‌ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್‌ ಪಾಯಿಂಟ್‌, ಸಿಸಿ ಟಿವಿ, ಬಯೋ ಶೌಚಾಲಯ ವ್ಯವಸ್ಥೆ ಇದೆ

Share News

About bigtvnews22

Check Also

ಹಳೇ ಹುಬ್ಬಳ್ಳಿಯಲ್ಲಿ ಗಾಂಜಾ ದಂಧೆಗೆ ಸಿಸಿಬಿ ಬ್ರೇಕ್..! 3.213 ಕೆಜಿ ಗಾಂಜಾ ಸಹಿತ ಇಬ್ಬರು ಅರೆಸ್ಟ್; ₹1.60 ಲಕ್ಷ ಮೌಲ್ಯದ ಮಾಲು ವಶ..!

ಹಳೇ ಹುಬ್ಬಳ್ಳಿಯಲ್ಲಿ ಗಾಂಜಾ ದಂಧೆಗೆ ಸಿಸಿಬಿ ಬ್ರೇಕ್..! ಇಬ್ಬರು ಗಾಂಜಾ ಮಾರಾಟಗಾರರ ಬಂಧನ; ₹1.60 ಲಕ್ಷ ಮೌಲ್ಯದ ಮಾಲು ವಶ..! …

Leave a Reply

Your email address will not be published. Required fields are marked *