ಹುಬ್ಬಳ್ಳಿ: ಆ್ಯಪ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ತೋರಿಸಿದ ಆನ್‌ಲೈನ್ ವಂಚಕ, ವ್ಯಕ್ತಿಯೊಬ್ಬರಿಂದ ₹7.42 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾನೆ.
ಬ್ರೌಸಿಂಗ್ ಸಂದರ್ಭದಲ್ಲಿ ಆ್ಯಪ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತು ಮೇಲೆ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ. ಹೂಡಿದ ಮೊತ್ತಕ್ಕಿಂತ ಹೆಚ್ಚಿನ ಲಾಭ ಪಡೆಯಬಹುದು ಎಂದು ಜಾಹೀರಾತಿನಲ್ಲಿ ಇದ್ದಿದ್ದನ್ನು ನಿಜ ಎಂದು ನಂಬಿದ ವ್ಯಕ್ತಿ, ಮೊದಲಿಗೆ ₹749 ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರ ಬ್ಯಾಂಕ್ ಖಾತೆಗೆ ₹3,475 ಬಂದಿದೆ. ಇನ್ನೂ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಸಿಗಲಿದೆ ಎಂದು ವಂಚಕ ಆಮಿಷ ತೋರಿಸಿದ್ದಾನೆ. ಅದನ್ನು ನಂಬಿದ ವ್ಯಕ್ತಿ ತನ್ನ ತಾಯಿ ಖಾತೆಯಿಂದ ₹6.91 ಲಕ್ಷ ಮತ್ತು ತಂದೆ ಖಾತೆಯಿಂದ ₹50 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

