Breaking News

ಕಣ್ಣೀರನಲ್ಲಿ ಮಗಳಿಗೆ ವಿದಾಯ


ಮೈಸೂರು: ಎಂಸಿಡಿಸಿಸಿ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಅವರ ಮಗಳು ಸಾವಿಗೀಡಾಗಿದ್ದು, ತಂದೆಯು ಮಗಳ ಮೃತದೇಹ ತಬ್ಬಿ ಗೋಳಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಂಚಲಿ ನೀರುತಂದಿದೆ.

ಮೈಸೂರಿನ ಗುಂಗ್ರಾಲ್ ಛತ್ರದ ತೋಟದ ಮನೆಯಲ್ಲಿ ಹರೀಶ್ ಗೌಡ ಅವರು ತಮ್ಮ ಮಗಳಾದ ಮೂವರು ವರ್ಷದ ಕಂದಮ್ಮ ಗೌರಿಯ ಅಂತ್ಯಕ್ರಿಯೆ‌ ನೆರವೇರಿಸಿದರು. ಮಗಳಿಗೆ ಅಂತಿಮ ವಿದಾಯ ಹೇಳುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಗೌರಿ ಶನಿವಾರ ರಾತ್ರಿ ಇಹಲೋಹ ತ್ಯಜಿಸಿದ್ದಳು. ಇಂದು ಸಂಪ್ರದಾಯದಂತೆ ಗೌರಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಅವರ ಕುಟುಂಬಸ್ಥರು, ಜೆಡಿಎಸ್​ ಯುವ ಮುಖಂಡ ನಿಖಿಲ್​ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *