ಧಾರವಾಡ : ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ , ಧಾರವಾಡ ರಾಯಾಪುರ ಕಚೇರಿಯಲ್ಲಿ , ಜಿಲ್ಲೆಯ ಯುವಜನತೆಗೆ ವಿದೇಶಿ ಉದ್ಯೋಗಗಳ ಬಗ್ಗೆ ಮಾಹಿತಿ ಒದಗಿಸಲು ಮತ್ತು ಉದ್ಯೋಗ ಪಡೆಯಲು ಪ್ರಾದೇಶಿಕ ಮಾಹಿತಿ ಕೇಂದ್ರ ತೆರೆಯಲಾಗಿರುತ್ತದೆ .
ಈ ಮಾಹಿತಿ ಕೇಂದ್ರವು ಧಾರವಾಡ , ಬೆಳಗಾವಿ , ವಿಜಯಪುರ , ಬಾಗಲಕೋಟೆ , ಗದಗ , ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯನ್ನು ಹೊಂದಿರುತ್ತದೆ . ಆಸಕ್ತರು ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಕೈಗಾರಿಕೆ ಕೇಂದ್ರ , 1 ಮಹಡಿ ರಾಯಾಪುರ ಧಾರವಾಡ ಕಚೇರಿಗೆ ಬೇಟಿ ನೀಡಬಹುದು . ಮಾಹಿತಿಗಾಗಿ ದೂರವಾಣಿ ಸಂಖ್ಯೆ : 0836-2972388 , ಬಸವರಾಜ ಕಟ್ಟಿ –8147247968 ಶುಭಶ್ರೀ –9449927305 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

